ಮುಂಬೈ, ಜು 28 (DaijiworldNews/PY): "ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಅಂತ ವಿಡಿಯೋ ನಿರ್ದೇಶನ ಮಾಡುವುದು ನಿರ್ಮಾಣ ಮಾಡುವುದು, ಇತರೆ ಪೋರ್ನ್ ಸಂಬಂಧಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದು ತಪ್ಪಲ್ಲ" ಎಂದು ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ ಹೇಳಿದ್ದಾರೆ.
"ಇತರೆ ಉದ್ಯಮಗಳಂತೆ ಅದೂ ಕೂಡಾ ಒಂದು ಉದ್ಯಮವಾಗಿದ್ದು, ಅದೂ ಕೂಡಾ ಒಂದು ವೃತ್ತಿ. ಪೋರ್ನ್ ಅನ್ನು ಉದ್ಯೋಗವಾಗಿ ಸ್ವೀಕರಿಸುವ ಯಾವ ವ್ಯಕ್ತಿಯನ್ನು ನಾನು ಕೆಟ್ಟವರೆಂದು ಭಾವಿಸಲಾರೆ. ಆದರೆ, ಲೈಂಗಿಕ ದೌರ್ಜನ್ಯ ಅಥವಾ ಮೋಸ ಮಾಡಬಾರದು" ಎಂದಿದ್ಧಾರೆ.
"ಲೈಂಗಿಕತೆಯನ್ನು ಎಷ್ಟು ಬಚ್ಚಿಡಲಾಗುತ್ತದೆಯೋ ಅಷ್ಟು ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ. ವೆಬ್ ಸರಣಿಗಳಲ್ಲಿನ ಕೆಲ ಸಿನಿಮಾಗಳಲ್ಲಿ ಬೋಲ್ಡ್ ಆದ ದೃಶ್ಯಗಳ ಸಾಮಾನ್ಯ ಎನ್ನುವಂತಾಗಿದೆ. ಹಾಗೆಯೇ ಪೋರ್ನ್ ಕೂಡಾ ಸಾಮಾನ್ಯವಾಗಿದೆ" ಎಂದು ಹೇಳಿದ್ದಾರೆ.
"ಲೈಂಗಿಕತೆ ಮನುಷ್ಯನ ಸಹಜ ಕ್ರಿಯೆ. ಹಾಗಾಗಿ ಪೋರ್ನ್ಗೆ ಸಹ ನಿರ್ಬಂಧ ಇರಕೂಡದು. ಪೋರ್ನ್ ಹೆಸರಿನಲ್ಲಿ ಯಾರ ಮೇಲೂ ಬಲವಂತ, ದೌರ್ಜನ್ಯ ಆಗದೇ ಇದ್ದಲ್ಲಿ ಪೋರ್ನ್ಗೆ ನನ್ನ ಸಹಮತವಿದೆ" ಎಂದಿದ್ದಾರೆ.
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಪ್ರಸಾರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇರೆಗೆ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು.
ಅಶ್ಲೀಲ ವಿಡಿಯೋಗಳನ್ನು ರಾಜ್ ಕುಂದ್ರಾ ಅವರ ನಿರ್ಮಾಣ ಮಾಡಿಲ್ಲ. ಬದಲಾಗಿ ಶೃಂಗಾರದ ವಿಡಿಯೋಗಳ ಮಾದರಿಯ ವಿಡಿಯೋಗಳನ್ನು ಮಾತ್ರವೇ ನಿರ್ಮಾಣ ಮಾಡಿದ್ದಾರೆ. ಭಾರತೀಯ ಕಾನೂನಿನಲ್ಲಿ ಆ ರೀತಿಯ ವಿಡಿಯೋಗಳಿಗೆ ಸಮ್ಮತವಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.