ಮುಂಬೈ, ಜು.25 (DaijiworldNews/HR): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಪೋರ್ನ್ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದು, ಇತ್ತ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಶೆಟ್ಟಿಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಶಿಲ್ಪಾ ಶೆಟ್ಟಿ ನಟಿಸಿರುವ ಹಂಗಮಾ 2 ಸಿನಿಮಾ ಜು.23ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೂಲಕ ರಿಲೀಸ್ ಆಗಿದ್ದು, ಹಲವು ವರ್ಷಗಳ ಬಳಿಕ ಸಿನಿಮಾ ಇದು. ಅದಕ್ಕಾಗಿ ಅಕ್ಕನಿಗೆ ಶಮಿತಾ ಶೆಟ್ಟಿ ಶುಭ ಕೋರಿದ್ದು, 14 ವರ್ಷಗಳ ನಂತರ ನಿನ್ನ ನಟನೆಯ ಹಂಗಾಮಾ 2 ರಿಲೀಸ್ ಆಗಿದ್ದು ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜೊತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಿ.ಹಂಗಾಮಾ 2 ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶಮಿತಾ ಬರೆದುಕೊಂಡಿದ್ದಾರೆ.
ಇನ್ನು ಈ ಪೋಸ್ಟ್ಗೆ ಕಾಮೆಂಟ್ ಮಾಡಿರುವ ಬಹುತೇಕರು, ರಾಜ್ ಕುಂದ್ರಾ ವಿಚಾರವನ್ನು ಎಳೆದು ತಂದು ತುಂಬಾ ಕಟುವಾಗಿ ಟ್ರೋಲ್ ಮಾಡಿದ್ದು, ನಿಮ್ಮ ಅಕ್ಕ ನಮಗೆ ಬೆಳಗ್ಗಿನ ಯೋಗ ಪೋಸ್ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಬಾವ ರಾತ್ರಿಯ ಯೋಗಪೋಸ್ಗಳನ್ನು ಕಲಿಸಿಕೊಡುತ್ತಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಾಜ್ ಕುಂದ್ರಾ ಹೇಗಿದ್ದಾರೆ? ಅವರನ್ನು ಯಾಕೆ ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ? ಈ ಸಂದರ್ಭದಲ್ಲಿ ಶಿಲ್ಪಾಗಿಂತಲೂ ಹೆಚ್ಚು ಶುಭ ಹಾರೈಕೆ ಬೇಕಿರುವುದು ಅವರಿಗೆ ಎಂಬ ಇತ್ಯಾದಿ ಹಲವಾರು ಕಾಮೆಂಟ್ಗಳ ಮೂಲಕ ಜನ ಕಾಲೆಳೆದಿದ್ದಾರೆ.