ಹೈದರಬಾದ್ , ಜು 22 (DaijiworldNews/MS): ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ನಂದಮೂರಿ ಬಾಲಕೃಷ್ಣ ಮತ್ತೊಂದು ವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನಂದಮೂರಿ ಬಾಲಕೃಷ್ಣ ಭಾರತ ರತ್ನ ಪ್ರಶಸ್ತಿ ತೆಲುಗು ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ, " ತನ್ನ ತಂದೆ ಎನ್ ಟಿ ರಾಮರಾವ್ ಅವರ ಕಾಲ್ಬೆರಳಿಗೆ ಸಮ ಹಾಗೂ ಭಾರತ ರತ್ನ ಪ್ರಶಸ್ತಿ ತನ್ನ ತಂದೆ ಎನ್ ಟಿ ರಾಮರಾವ್ ಅವರ ಕಾಲ್ಬೆರಳಿಗೆ ಸಮ ಎಂದು ಹೇಳಿದ್ದಾರೆ.
ರೆಹಮಾನ್ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ ಎಂದು ಕೇಳಿದ್ದೇನೆ. ದರೆ, ನನಗಿನ್ನೂ ಅವರು ಯಾರೆಂದೇ ಗೊತ್ತಾಗಿಲ್ಲ. ರೆಹಮಾನ್ ಎಲ್ಲೋ ಹತ್ತು ವರ್ಷಕ್ಕೊಂದು ಹಿಟ್ ಗೀತೆಯನ್ನು ಕೊಡುತ್ತಾರೆ ಅಷ್ಟೇ ಎನ್ನುವ ಮೂಲಕ ಹಗುರವಾಗಿ ಮಾತನಾಡಿದ್ದಾರೆ.
ಇದಿಷ್ಟೇ ಅಲ್ಲದೆ, ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯ ಬಗ್ಗೆಯೂ ಲೇವಡಿ ಮಾಡುವ ಮೂಲಕ ನಂದಮೂರಿ ಬಾಲಕೃಷ್ಣ ವಿವಾದಕ್ಕೀಡಾಗಿದ್ದಾರೆ. ಭಾರತ ರತ್ನ ಪ್ರಶಸ್ತಿ ನನ್ನ ತಂದೆ ಎನ್ಟಿಆರ್ ಅವರ ಕಾಲಿನ ಬೆರಳಿನ ಉಗುರಿಗೆ ಸಮಾನ. ಯಾವ ಪ್ರಶಸ್ತಿಗಳೂ ನಮ್ಮ ಕುಟುಂಬ ಟಾಲಿವುಡ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಮೀರಿಸಲು ಸಾಧ್ಯವಿಲ್ಲ. ನಮಗ್ಯಾರಿಗೂ ಪ್ರಶಸ್ತಿಗಳು ಬಂದಿಲ್ಲವೆಂದರೆ ಆ ಪ್ರಶಸ್ತಿಗಳೇ ಬೇಸರ ಮಾಡಿಕೊಳ್ಳಬೇಕೇ ಹೊರತು ನಾವಲ್ಲ ಎಂದು ಹೇಳಿಕೆ ನೀಡಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.