ಮುಂಬೈ, ಜು 21 (DaijiworldNews/PY): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇಷ್ಟು ವರ್ಷವಾದರೂ ಏಕೆ ವಿವಾಹವಾಗಿಲ್ಲ ಎನ್ನುವ ಪ್ರಶ್ನೆ ಸದಾ ಕೇಳಿಬರುತ್ತಿದೆ. ಈ ಪ್ರಶ್ನೆ ಕೇಳಿದಾಗಲೆಲ್ಲಾ ಸಲ್ಮಾನ್ ಏನೇನೋ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿರುತ್ತಾರೆ. ಈ ನಡುವೆ ಸಲ್ಮಾನ್ ಖಾನ್ಗೆ ದುಬೈನಲ್ಲಿ ಕುಟುಂಬವಿದ್ದು, ಪತ್ನಿ ಹಾಗೂ 17 ವರ್ಷದ ಮಗಳಿದ್ದಾಳೆ ಎನ್ನುವ ಮಾತು ಕೇಳಿಬಂದಿದೆ.
ಸಲ್ಮಾನ್ ಖಾನ್ ಅವರು ಸಹೋದರ ಅರ್ಬಾಜ್ ಖಾನ್ ಅವರು ನಡೆಸಿಕೊಡುವ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದು, ಈ ಸಂದರ್ಭ ಆ ವಿಚಾರದ ಬಗ್ಗೆ ಚರ್ಚೆಯಾಗಿದೆ. ಸಲ್ಮಾನ್ ಖಾನ್ಗೆ ದುಬೈನಲ್ಲಿ ಕುಟುಂಬವಿದ್ದು, ಪತ್ನಿ ಹಾಗೂ 17 ವರ್ಷದ ಮಗಳಿದ್ದಾಳೆ ಎನ್ನುವ ವಿಚಾರವನ್ನು ಖಾನ್ ಕುಟುಂಬ ಮುಚ್ಚಿಟ್ಟಿದೆ ಎಂದು ವ್ಯಕ್ತಿಯೋರ್ವರು ಟ್ವೀಟ್ ಮಾಡಿದ್ದರು. ಈ ಬಗ್ಗೆ ಅನೇಮ ಮಂದಿ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದರು.
ನೀನು ಎಲ್ಲಿ ಬಚ್ಚಿಟ್ಟುಕೊಂಡಿದ್ದೀಯಾ?. ಹೇಡಿ ನೀನು. ನೀನು ನಿನ್ನ ಪತ್ನಿ ಹಾಗೂ 17 ವರ್ಷದ ಮಗಳ ಜೊತೆ ದುಬೈನಲ್ಲಿದ್ದೀಯಾ ಎಂದು ಭಾರತೀಯರಿಗೆ ತಿಳಿದಿದೆ. ಹೀಗೆ ನಮ್ಮನ್ನು ಎಷ್ಟು ದಿನ ಮೂರ್ಖರನ್ನಾಗಿ ಮಾಡುತ್ತೀಯಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕಮೆಂಟ್ ಮಾಡಿದ್ದರು ಎಂದು ಅರ್ಬಾಜ್ ತಿಳಿಸಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ.
"ಅವರೆಲ್ಲಾ ಯಾರ ಬಗ್ಗೆ ಮಾತನಾಡುತ್ತಿದ್ದಾರೆ?. ಈ ರೀತಿಯಾಗಿ ಎಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಈ ರೀತಿಯಾದ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಭಾವಿಸಿದ್ದೀರಾ?. ನನಗೆ ಹೆಂಡತಿ ಇಲ್ಲ. ನಾನು 9ನೇ ವಯಸ್ಸಿನಿಂ ಭಾರತದಲ್ಲಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೇನೆ. ನಾನು ಆ ವ್ಯಕ್ತಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಎಲ್ಲಿ ಇದ್ದೇನೆ ಎಂದು ಭಾರತಕ್ಕೆ ಗೊತ್ತಿದೆ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಅನೇಕ ನಟಿಯರ ಜೊತೆ ಸಲ್ಮಾನ್ ಖಾನ್ ಅವರು ಡೇಟ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕೇಳಿಬಂದಿದ್ದು. ಆದರೆ, ಅವರು ವಿವಾಹವಾಗುತ್ತಿಲ್ಲ. ಸಲ್ಮಾನ್ ಖಾನ್ ಅವರು 90ರ ದಶಕದಲ್ಲಿ ವಿವಾಹಕ್ಕೆ ತಯಾರಿ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು.