ಮುಂಬೈ, ಜು. 15(DaijiworldNews/HR): ಬಾಲಿವುಡ್ ನಟಿ ಕರೀನಾ ಕಪೂರ್ ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಬರೆದಿದ್ದು, ಈ ಪುಸ್ತಕದ ಶೀರ್ಷಿಕೆಗೆ ಕ್ರಿಶ್ಚಿಯನ್ ಸಮೂಹ ಆಕ್ಷೇಪ ವ್ಯಕ್ತಪಡಿಸಿ ಕರೀನಾ ವಿರುದ್ಧ ಪೊಲೀಸ್ ಕೇಸ್ ದಾಖಲು ಮಾಡಲಾಗಿದೆ.
ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಕರೀನಾ ಮತ್ತು ಇತರ ಇಬ್ಬರು ವಿರುದ್ಧ ಮಹಾರಾಷ್ಟ್ರದ ಬೀಡ್ ನಗರದಲ್ಲಿ ಪೊಲೀಸ್ ದೂರು ದಾಖಲಿಸಲಾಗಿದೆ.
ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಗ್ ಅಧ್ಯಕ್ಷ ಆಶಿಶ್ ಶಿಂಧೆ ಎರಡನೇ ಲೇಖಕನನ್ನು ಹೊಂದಿರುವ ಪುಸ್ತಕದ ಕುರಿತು ಬೀಡ್ನ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, "'ಬೈಬಲ್ ಎಂಬ ಪವಿತ್ರ ಪದವನ್ನು ಪುಸ್ತಕದ ಶೀರ್ಷಿಕೆಯಲ್ಲಿ ಬಳಸಲಾಗಿದೆ ಮತ್ತು ಇದು ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ" ಎಂದಿದ್ದಾರೆ.
ಕರಿನಾ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದವರ ಧರ್ಮ ಅಥವಾ ಅವಮಾನಕರ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆಕ್ರೋಶದ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಪ್ರಕರಣವನ್ನು ನೋಂದಾಯಿಸಲು ಶಿಂಧೆ ಕೋರಿದ್ದಾರೆ ಎಂದು ವರದಿಯಾಗಿದೆ.
ನಟಿ ಕರೀನಾ ತನ್ನ ಪುಸ್ತಕವನ್ನು ಜುಲೈ 9 ರಂದು ಬಿಡುಗಡೆ ಮಾಡಿದ್ದು, ಇದನ್ನು ತನ್ನ ಮೂರನೇ ಮಗು ಎಂದು ಕರೆದಿದ್ದರು.