ಮುಂಬೈ, ಜು. 4 (DaijiworldNews/HR): ನಟಿ ಮೆಹ್ರೀನ್ ಕೌರ್ ಪಿರ್ಝಾದಾ ಅವರು ಮಾಜಿ ಮುಖ್ಯಮಂತ್ರಿಯ ಮೊಮ್ಮಗ ಹಾಗೂ ನಟ, ರಾಜಕಾರಣಿ ಭವ್ಯ ಬಿಷ್ಣೋಯಿ ಅವರೊಂದಿಗೆ ನಡೆದಿದ್ದ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಬ್ಯುಸಿಯಾಗಿರುವ ಮೆಹ್ರೀನ್ ಪಿರ್ಝಾದಾ ಇನ್ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥ ಮುರಿದುಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ.
ಇನ್ನು ಭವ್ಯ ಬಿಷ್ಣೋಯಿ ಮತ್ತು ನಾನು ನಿಶ್ಚಿತಾರ್ಥವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದು, ಮದುವೆ ಅಗದಿರಲು ತೀರ್ಮಾನಿಸಿದ್ದೇವೆ. ನಾವು ಇಬ್ಬರು ಒಟ್ಟಿಗೆ ಸೇರಿ ನಮ್ಮ ಉತ್ತಮ ಭವಿಷ್ಯಕ್ಕಾಗಿ ತೆಗೆದುಕೊಂಡ ದಿಟ್ಟ ನಿರ್ಧಾರವಾಗಿದೆ ಎಂದು ಮೆಹ್ರೀನ್ ಸ್ಪಷ್ಟನೆ ನೀಡಿದ್ದಾರೆ.
ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಾದ ಪಟ್ಟಾಸ್, ಅಶ್ವತ್ಥಾಮ, ಚಾಣಕ್ಯ, ಜವಾನ್, ಕವಚಂ, ರಾಜಾ ದಿ ಗ್ರೇಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೆಹ್ರೀನ್ ಪಿರ್ಝಾದಾ ನಟಿಸಿದ್ದಾರೆ.