ಬೆಂಗಳೂರು, ಜೂ. 26(DaijiworldNews/HR): ಬಹು ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ಗಳಲ್ಲಿ ಅಭಿನಯಿಸುತ್ತಿದ್ದು, ಇದೀಗ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಮುಂಬೈನಲ್ಲಿ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎನ್ನಲಾಗಿದೆ.
ಕೊರೊನಾ ಲಾಕ್ಡೌನ್ ಸಡಿಲಿಕೆಯ ಬಳಿಕ ಮತ್ತೆ ಸಿನಿಮಾ ಚಟುವಟಿಕೆಗಳು ಆರಂಭವಾಗಿದ್ದು, ರಶ್ಮಿಕಾ ಅವರು ಮುಂಬೈನಲ್ಲಿ ತಮ್ಮ ಹೊಸ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಮಾಹಿತಿ ನೀಡಿದ್ದಾರೆ.
ಇನ್ನು "ಇವತ್ತು ತುಂಬ ಕೆಲಸ ಆಯಿತು. ಕಡೆಗೂ ನಾನು ಅಪಾರ್ಟ್ಮೆಂಟ್ಗೆ ಶಿಫ್ಟ್ ಆದೆ. ತುಂಬ ವಸ್ತುಗಳನ್ನು ಖರೀದಿಸಬೇಕಿತ್ತು. ಅದು ಇನ್ನೂ ಮುಗಿದಿಲ್ಲ. ಅದು ಎಂದಿಗೂ ಮುಗಿಯುವಂಥದ್ದು ಕೂಡ ಅಲ್ಲ. ಔರಾ (ಅವರ ಪ್ರೀತಿಯ ಶ್ವಾನ) ಇಡೀ ದಿನ ಹೊರಗೆ ಇದ್ದಳು. ನನ್ನ ಇಬ್ಬರು ಸ್ನೇಹಿತರನ್ನು ಭೇಟಿಯಾಗಬೇಕಿತ್ತು. ಅಪಾರ್ಟ್ಮೆಂಟ್ ಸಜ್ಜುಗೊಳಿಸಬೇಕಿತ್ತು. ನನ್ನ ಅಸಿಸ್ಟೆಂಟ್ ನನಗೆ ಸಹಾಯ ಮಾಡಿದ. ನನಗೆ ಮತ್ತು ಔರಾಗೆ ತುಂಬ ಸುಸ್ತಾಗಿತ್ತು" ಎಂದು ರಶ್ಮಿಕಾ ಬರೆದುಕೊಂಡಿದ್ದರು.
ಬಾಲಿವುಡ್ನಲ್ಲಿ ರಶ್ಮಿಕಾ ನಟಿಸುತ್ತಿರುವ ಮೊದಲ ಸಿನಿಮಾದ ಹೆಸರು 'ಮಿಷನ್ ಮಜ್ನು' ಆ ಚಿತ್ರದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿದ್ದಾರೆ. ಎರಡನೇ ಚಿತ್ರ 'ಗುಡ್ಬೈ'ನಲ್ಲಿ ಅಮಿತಾಭ್ ಹಾಗೂ ರಶ್ಮಿಕಾ ಅಪ್ಪ-ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.