ಬೆಂಗಳೂರು, ಜೂ. 19 (DaijiworldNews/HR): ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅನೇಕ ಕಾರಣಗಳಿಗಾಗಿ ಆಗಾಗ ಸುದ್ದಿ ಆಗುತ್ತಲೇ ಇದ್ದು, ಇದೀಗ ರಶ್ಮಿಕಾ ಮುದ್ದಾದ ನಾಯಿ ಸಾಕಿದ್ದು, ಅದಕ್ಕೆ ಔರಾ ಎಂದು ಹೆಸರು ಇಟ್ಟಿದ್ದು, ಆ ಔರಾ ರಶ್ಮಿಕಾ ಮುಖಕ್ಕೆ ಮುತ್ತು ಕೊಡುತ್ತಿರುವ ಫೋಟೋ ವೈರಲ್ ಆಗಿದೆ.
ಈಗಾಗಲೇ ರಶ್ಮಿಕಾ ಅವರು ಔರಾ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ರಶ್ಮಿಕಾ ಎಲ್ಲೇ ಹೋದರೂ ಅವರನ್ನು ಔರಾ ಹಿಂಬಾಲಿಸುತ್ತದೆ. ಈಗ ಅವರು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ರಶ್ಮಿಕಾ ಮುಖಕ್ಕೆ ಔರಾ ಮುತ್ತಿಡುತ್ತಿರುವುದನ್ನು ಕಂಡು ಅಭಿಮಾನಿಗಳು ನಾನಾ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಈ ಪೊಟೋಗೆ 'ನಾನು ಮತ್ತು ಔರಾ ನಿಮ್ಮ ಫೀಡ್ನಲ್ಲಿ' ಎಂದು ರಶ್ಮಿಕಾ ಕ್ಯಾಪ್ಷನ್ ನೀಡಿದ್ದಾರೆ.
"ಹೊರ ಜಗತ್ತಿನ ಎಲ್ಲ ಗದ್ದಲದ ನಡುವೆಯೂ ನಾನು ನನ್ನ ಖುಷಿಯನ್ನು ಕಂಡುಕೊಂಡಿದ್ದೇನೆ. ಇದು ಸದಾ ನನ್ನನ್ನು ಖುಷಿಯಾಗಿ ಇಡುತ್ತದೆ. ನಿಮ್ಮೆಲ್ಲರಿಗೂ ನಾನು ಪುಟ್ಟ ಔರಾ ಪರಿಚಯ ಮಾಡಿಕೊಡುತ್ತಿದ್ದೇನೆ. ಮೂರು ಸೆಕೆಂಡ್ನೊಳಗೆ ಪ್ರೀತಿಯಲ್ಲಿ ಬೀಳಬಹುದು ಎನ್ನುತ್ತಾರೆ. ಆದರೆ ಇವಳು ಕೇವಲ 0.3 ಸೆಕೆಂಡ್ನಲ್ಲಿ ನನ್ನ ಹೃದಯ ಕದ್ದಳು" ಎಂದು ಕೆಲವು ದಿನಗಳ ಹಿಂದೆ ತಮ್ಮ ಪ್ರೀತಿಯ ನಾಯಿಯನ್ನು ರಶ್ಮಿಕಾ ಪರಿಚಯ ಮಾಡಿಕೊಟ್ಟಿದ್ದರು.