ಬೆಂಗಳೂರು, ಜೂ. 13 (DaijiworldNews/HR): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವು ಸಂಭವಿಸಿ ಜೂನ್ 14 ಒಂದು ವರ್ಷವಾಗಲಿದ್ದು, ಸುಶಾಂತ್ ಅವರ ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಇಂದು ನೆಟ್ಟಿಗರು ಟ್ವೀಟರ್ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್ಗೆ ನ್ಯಾಯ ಸಿಗಬೇಕು ಎಂದು ಜಸ್ಟಿಸ್ ಫಾರ್ ಸುಶಾಂತ್ ಸಿಂಗ್ ಎಂಬ ಅಭಿಯಾನ ಆರಂಭಿಸಿದ್ದಾರೆ.
ಟ್ವಿಟರ್ನಲ್ಲಿ #ಸುಶಾಂತ್ ಸಿಂಗ್ ರಜಪೂತ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಇನ್ನು ಸಿಬಿಐ ಸುಶಾಂತ್ ಹತ್ಯೆ ಸಂಚನ್ನು ಯಾವಾಗ ಬಯಲಿಗೆಳೆಯವುದು? ಎಂದು ಕೆಲವರು ಪ್ರಶ್ನಿಸಿದರೆ, ಸುಶಾಂತ್ಗೆ ನ್ಯಾಯ ಸಿಗುವ ಭರವಸೆ ಇದೆ. ಅವರು ಯಾವುದೋ ಸಂಚಿಗೆ ಬಲಿಯಾಗಿದ್ದಾರೆ. ಅವರಿಗೆ ಖಂಡಿತವಾಗಿಯೂ ನ್ಯಾಯ ಸಿಗಬೇಕು ಎಂದು ಟ್ವೀಟ್ಗಳನ್ನು ಮಾಡಿದ್ದಾರೆ.
ಸುಶಾಂತ್ ಸಾವು ಸಂಭವಿಸಿದ ಬಳಿಕ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೊಂದು ಆತ್ಮಹತ್ಯೆ ಎಂದು ಹೇಳಿದ್ದು, ಸುಶಾಂತ್ ಅವರ ತಂದೆ ಇದೊಂದು ಕೊಲೆ ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
ಮನವಿ ಪರಿಗಣಿಸಿದ್ದ ಸುಪ್ರೀಂ, ಆಗಸ್ಟ್ 19 ರಂದು ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಸಿಬಿಐ ತನಿಖೆ ನಂತರ ಪ್ರಕರಣದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಹೆಸರು ಕೇಳಿ ಬಂದಿದ್ದರಿಂದ ಅವರನ್ನು ಬಂಧಿಸಿದ್ದು, ಆ ಬಳಿಕ ಡ್ರಗ್ಸ್ನಿಂದ ಸುಶಾಂತ್ ಸಾವು ಸಂಭವಿಸಿದೆ ಎಂಬ ಮಾತು ಕೇಳಿ ಬಂದಿತ್ತು.