ಮುಂಬೈ, ಜೂ.12 (DaijiworldNews/HR): ಕರಾವಳಿ ಬೆಡಗಿ, ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ಕುಂದ್ರಾ 2009ರಲ್ಲಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ 12 ವರ್ಷಗಳ ನಂತರದಲ್ಲಿ ಶಿಲ್ಪಾ ಶೆಟ್ಟಿ ಇದೇ ಮೊದಲ ಬಾರಿಗೆ ರಾಜ್ ಕುಂದ್ರಾ ವಿರುದ್ಧ ಕಿಡಿಕಾರಿದ್ದು, ಇದಕ್ಕೆ ಕಾರಣ ರಾಜ್ ಕುಂದ್ರಾ ಮೊದಲ ಹೆಂಡತಿ ಕವಿತಾ ಕುಂದ್ರಾ.
ರಾಜ್ ಕುಂದ್ರಾ ಅವರು ಶಿಲ್ಪಾ ಶೆಟ್ಟಿಯನ್ನು ಮದುವೆ ಯಾಗುವ ಮೊದಲು ಕವಿತಾ ಕುಂದ್ರಾ ಅವರನ್ನು ಮದುವೆ ಆಗಿದ್ದರು. ಆದರೆ ರಾಜ್ ಕುಂದ್ರಾ ಭಾವನ ಜತೆ ಸೇರಿಕೊಂಡು ಕವಿತಾ ಮೋಸ ಮಾಡಿರುವ ವಿಚಾರವನ್ನು ಸಾರ್ವಜನಿಕವಾಗಿ ರಾಜ್ ಎಲ್ಲಿಯೂ ಬಾಯ್ಬಿಟ್ಟಿಲ್ಲ. ಆದರೆ ಆ ವಿಷಯವನ್ನು ಅವರು ಈಗ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರನ್ನು ರಾಜ್ ಕುಂದ್ರಾ , "ನನ್ನ ಮತ್ತು ಕವಿತಾ ಸಂಸಾರದಲ್ಲಿ ಬಿರುಕು ಮೂಡಲು ಶಿಲ್ಪಾ ಕಾರಣ ಎನ್ನುವ ಅನೇಕ ಸುದ್ದಿಗಳು ಹರಿದಾಡಿದ್ದವು. ಆದರೆ ಅದು ಸುಳ್ಳು ಸುದ್ದಿಯಾಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡೋದು ಶಿಲ್ಪಾಗೆ ಇಷ್ಟವಾಗುವುದಿಲ್ಲ. ಈ ಲೇಖನಗಳು ಈಗ ಮತ್ತೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಮಾತನಾಡುವುದು ಶಿಲ್ಪಾಗೆ ಇಷ್ಟವಿಲ್ಲ. ಆದರೆ, ಒಂದು ದಿನ ಸತ್ಯ ಹೊರ ಬರಲೇಬೇಕು" ಎಂದರು.
ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾ ಹಾಗೂ ರಾಜ್ ತಂಗಿಯ ಗಂಡನ ನಡುವೆ ಅಕ್ರಮ ಸಂಬಂಧ ಇತ್ತು. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರಂತೆ. ಈ ವಿಚಾರದ ಬಗ್ಗೆ ರಾಜ್ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ಇನ್ನು"ನನ್ನ ಮನೆಯಲ್ಲಿ ನಾನು, ನನ್ನ ತಂದೆ, ತಂಗಿ ಮತ್ತು ಅವಳ ಗಂಡ ವಾಸವಾಗಿದ್ದೆವು. ತಂಗಿಯ ಗಂಡ ಇಂಗ್ಲೆಂಡ್ನಲ್ಲಿ ನೆಲೆಸಲು ಪ್ರಯತ್ನಿಸಿದ್ದು, ಆತನ ಜತೆ ನನ್ನ ಪತ್ನಿ ಕವಿತಾ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದು, ನನ್ನ ಕುಟುಂಬದವರು ಹಾಗೂ ಕಾರು ಚಾಲಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ನಾನು ಅದನ್ನು ಎಂದಿಗೂ ನಂಬಲಿಲ್ಲ. ಆ ಬಳಿಕ ಒಂದು ದಿನ ಫೋನ್ ನನ್ನ ಕೈಗೆ ಸಿಕ್ಕಗಾ ಎಲ್ಲವೂ ಬಹಿರಂಗವಾಯಿತು" ಎಂದು ಹೇಳಿದ್ದಾರೆ.