ಮುಂಬೈ, ಜೂ 11 (DaijiworldNews/MS): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೀವನದ ಕಥೆಯಿಂದ ಪ್ರೇರಿತವಾದ ಚಿತ್ರ "ನ್ಯಾಯ್ - ದಿ ಜಸ್ಟೀಸ್ ಬಿಡುಗಡೆ ಯನ್ನು ತಡೆಹಿಡಿಯುವಂತೆ ಸಲ್ಲಿಸಿದ್ದ ಮನವಿಯನ್ನು ವಜಗೊಳಿಸಿದ ಬೆನ್ನಲ್ಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದ ಈ ಚಿತ್ರದ 2: 25 ನಿಮಿಷಗಳ ಅವಧಿಯ ಟ್ರೆಲರ್ ನಲ್ಲಿ ಅವರ ನಿಧನದ ನಂತರದ ನೈಜ ಘಟನೆಗಳಿಗೆ ಹಲವಾರು ಹೋಲಿಕೆಗಳನ್ನು ಹೊಂದಿರುವ ಅಂಶಗಳನ್ನು ಒಳಗೊಂಡಿದೆ.
ಚಿತ್ರದಲ್ಲಿ ಸುಶಾಂತ್, ರಿಯಾ ಚಕ್ರವರ್ತಿ ಸೇರಿ ಎಲ್ಲಾ ಪಾತ್ರಗಳಿದ್ದು ಎಲ್ಲರ ಹೆಸರನ್ನು ಬದಲಿಸಲಾಗಿದೆ. ಸುಶಾಂತ್ ಹೆಸರನ್ನು ಮಹೀಂದರ್ ಸಿಂಗ್ ಎಂದು ಬದಲಾಯಿಸಲಾಗಿದೆ. ಜುಬರ್ ಖಾನ್ ಮತ್ತು ಶ್ರೇಯಾ ಶುಕ್ಲಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಇಡಿ ಮುಖ್ಯಸ್ಥರಾಗಿ ಅಮನ್ ವರ್ಮಾ (ನಟ), ಮಹೀಂದರ್ ಸಿಂಗ್ ಅವರ ತಂದೆಯಾಗಿ ಅಸ್ರಾಣಿ, ಎನ್ಸಿಬಿ ಮುಖ್ಯಸ್ಥರಾಗಿ ಶಕ್ತಿ ಕಪೂರ್, ಮಹೇಂದ್ರ ಅವರ ತಂದೆಯ ವಕೀಲರಾಗಿ ಕಿರಣ್ ಕುಮಾರ್, ಮುಂಬೈ ಕಮಿಷನರ್ ಆಗಿ ಅನಂತ್ ಜೋಗ್, ಅನ್ವರ್ ಬಿಹಾರ ಪೊಲೀಸ್ ಆಯುಕ್ತರಾಗಿ ಫತೇಹನ್, ಸೆಲೆಬ್ರಿಟಿ ಮ್ಯಾನೇಜರ್ ಆಗಿ ಸೋಮಿ ಖಾನ್, ಬಾಲಿವುಡ್ ನಿರ್ದೇಶಕರಾಗಿ ಅರೂನ್ ಬಕ್ಷಿ, ಬಾಲಿವುಡ್ ನಿರ್ಮಾಪಕರಾಗಿ ಕಮಲ್ ಮಲಿಕ್ ಮತ್ತು ಸಿಬಿಐ ಮುಖ್ಯಸ್ಥರಾಗಿ ಸುಧಾ ಚಂದ್ರನ್ ಕಾಣಿಸಿಕೊಂಡಿದ್ದಾರೆ.
ಸರ್ಲಾ ಎ.ಸರೋಗಿ ಮತ್ತು ರಾಹುಲ್ ಶರ್ಮಾ ಚಿತ್ರವನ್ನು ನಿರ್ಮಿಸಿದ್ದು , ಚಿತ್ರಕಥೆ ಬರೆದು ದಿಲೀಪ್ ಗುಲಾಟಿ ನಿರ್ದೇಶಿಸಿದ್ದಾರೆ.