ಬೆಂಗಳೂರು, ಜೂ.06 (DaijiworldNews/HR): ನಟಿ ರಶ್ಮಿಕಾ ಮಂದಣ್ಣ ಲಾಕ್ಡೌನ್ ಅವಧಿಯಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ತಮ್ಮ ಕೆಲವು ಇಂಟರೆಸ್ಟಿಂಗ್ ದಿನಚರಿಯ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಿದ್ದು, ಈಗ ತಮಗೆ 0.3 ಸೆಕೆಂಡ್ನಲ್ಲಿ ಲವ್ ಆಯ್ತು ಎಂದು ಫೋಟೋವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.
ರಶ್ಮಿಕಾ ಲವ್ ಆಯ್ತು ಎಂದು ಹೇಳಿಕೊಂಡಿರುವುದು ತಮ್ಮ ಮುದ್ದಿನ ಹೊಸ ನಾಯಿ ಕುರಿತು. ಈಗ ಅವರ ಮನೆಗೆ ಹೊಸ ಶ್ವಾನದ ಆಗಮನ ಆಗಿದ್ದು, ಅದಕ್ಕೆ ಔರಾ ಎಂದು ಹೆಸರು ಇಟ್ಟಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು "ಹೊರ ಜಗತ್ತಿನ ಎಲ್ಲ ಗದ್ದಲದ ನಡುವೆಯೂ ನಾನು ನನ್ನ ಖುಷಿಯನ್ನು ಕಂಡುಕೊಂಡಿದ್ದೇನೆ. ಇದು ನನ್ನನ್ನು ಖುಷಿಯಾಗಿ ಇಡುತ್ತದೆ. ನಿಮ್ಮೆಲ್ಲರಿಗೂ ನಾನು ಪುಟ್ಟ ಔರಾ ಪರಿಚಯ ಮಾಡಿಕೊಡುತ್ತಿದ್ದೇನೆ. ಮೂರು ಸೆಕೆಂಡ್ನೊಳಗೆ ಪ್ರೀತಿಯಲ್ಲಿ ಬೀಳಬಹುದು ಎನ್ನುತ್ತಾರೆ. ಆದರೆ ಇವಳು ಕೇವಲ 0.3 ಸೆಕೆಂಡ್ನಲ್ಲಿ ನನ್ನ ಹೃದಯ ಕದ್ದಿದ್ದಾಳೆ" ಎಂದು ಬರೆದುಕೊಂಡಿದ್ದಾರೆ.