ಮುಂಬೈ, ಜೂ.04 (DaijiworldNews/HR): ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಇದೀಗ ದೇಹದ ತೂಕ ಇಳಿಸಿಕೊಂಡಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಕರೀನಾ ಕಪೂರ್ ಫೆಬ್ರವರಿ ತಿಂಗಳಿನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಇಷ್ಟುದಿನ ಮಗುವಿನ ಪಾಲನೆಯಲ್ಲಿ ನಿರತರಾಗಿದ್ದ ಕರೀನಾ ಇದೀಗ ಮತ್ತೆ ಫಿಟ್ನೆಸ್ ವರ್ಕ್ ಔಟ್ ಪ್ರಾರಂಭಿಸಿದ್ದಾರೆ.
ಸುಮಾರು ನಾಲ್ಕು ತಿಂಗಳ ಬಳಿಕ ವರ್ಕ್ಔಟ್ ಮಾಡಿ ದೇಹದ ತೂಕ ಇಳಿಸಿಕೊಂಡಿರುವ ಫೋಟೋವನ್ನು ಕರೀನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಫೋಟೋದಲ್ಲಿ ಕರಿನಾ ಪ್ರಿಂಟೆಡ್ ಬ್ಯಾಂಡೊ ಬ್ರಾ ಧರಿಸಿದ್ದು, ಗ್ಲಾಸ್ವೊಂದರ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ. ಕರೀನಾ ಪಕ್ಕದಲ್ಲಿ ಯೋಗ ಮ್ಯಾಟ್ ಇರುವುದನ್ನು ಕಾಣಬಹುದಾಗಿದೆ.