ಮುಂಬೈ, ಜೂ 02 (DaijiworldNews/MS): ಖ್ಯಾತ ಗಾಯಕಿ ಶ್ರೇಯಾ ತಮ್ಮ ಪ್ರೀತಿಯ ಕುಡಿಯನ್ನು ನೆಟ್ಟಿಗರಿಗೆ ಪರಿಚಯಿಸಿದ್ದಾರೆ. ತಮ್ಮ ಮಗುವಿನ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮಗುವಿನ ಹೆಸರನ್ನೂ ರಿವೀಲ್ ಮಾಡಿದ್ದಾರೆ.
ಶ್ರೇಯಾ ಘೋಶಾಲ್ ಹಾಗೂ ಅವರ ಪತಿ ಶೀಲಾದಿತ್ಯ ಮಗುವನ್ನ ಹಿಡಿದುಕೊಂಡಿರುವ ಫೋಟೋವನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೇಯಾ ಮಗುವಿಗೆ ದೇವಯಾನ್ ಮುಖ್ಯೋಪಾಧ್ಯಾಯ ಎಂದು ನಾಮಕರಣ ಮಾಡಿರುವುದಾಗಿ ಬರೆದುಕೊಂಡಿದ್ದಾರೆ
ನಿಮ್ಮೆಲ್ಲರಿಗೂ ದೇವಯಾನ್ ಮುಖ್ಯೋಪಾಧ್ಯಾಯನನ್ನ ಪರಿಚಯಿಸುತ್ತಿದ್ದೇನೆ. ಮೇ 22ರಂದು ನಮ್ಮ ಜೀವನಕ್ಕೆ ಆಗಮಿಸಿ ಇವನು ನಮ್ಮ ಜೀವನವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಈತ ಹುಟ್ಟಿದ ದಿನದಿಂದಲೇ ಪ್ರೀತಿ ಹಾಗೂ ಮಮತೆಯನ್ನ ನಮ್ಮ ಹೃದಯದಲ್ಲಿ ತುಂಬಿಬಿಟ್ಟಿದ್ದಾನೆ. ಅದನ್ನ ಒಬ್ಬ ತಂದೆ - ತಾಯಿ ಸ್ಥಾನದಲ್ಲಿದ್ದವರು ಮಾತ್ರ ಅನುಭವಿಸೋಕೆ ಸಾಧ್ಯ ಎಂದು ಅಡಿಬರಹ ನೀಡಿದ್ದಾರೆ.
ಶ್ರೇಯಾ ಘೋಷಾಲ್ ಹಂಚಿಕೊಂಡಿರುವ ಈ ಫೋಟೋದಲ್ಲಿ ಮಗುವಿನ ಮುಖ ಗೋಚರವಾಗುತ್ತಿಲ್ಲ. ಉದ್ಯಮಿ ಶೀಲಾದಿತ್ಯ ಮುಖೋಪಾಧ್ಯಯ ಜೊತೆ ಶ್ರೇಯಾ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು.