ಮಂಗಳೂರು, ಜೂ.01 (DaijiworldNews/HR): ಕರಾವಳಿ ಕರ್ನಾಟಕ ಮೂಲದ ಬಹು ಬೇಡಿಕೆಯ ಲೋಕಲ್ ವುಡ್ ಆಪ್ ತನ್ನ ಪ್ರಾಯೋಗಿಕ ಅವಧಿಯನ್ನು ಪೂರೈಸಿದ್ದು ಇದೀಗ ಮೊದಲ ವಾಣಿಜ್ಯ ಪ್ರದರ್ಶಣಕ್ಕೆ ಸಜ್ಜಾಗಿದೆ. ಜೂನ್ 10 ರಂದು ವಿಶೇಷ ತಾರಾಗಣವುಳ್ಳ ಕೊಂಕಣಿ ಸಿನೆಮಾ 'ಬೆಂಡ್ಕಾರ್' ಲೋಕಲ್ ವುಡ್ನಲ್ಲಿ ಬಿಡುಗಡೆಯಾಗಲಿದೆ.
ಕೊರೊನಾ ವಿಶ್ವವ್ಯಾಪ್ತಿಯಾಗಿ ಹರಡುವ ತಿಂಗಳುಗಳ ಮೊದಲು ನಾವು ಬೆಂಡ್ಕಾರ್ ಸಿನೆಮಾವನ್ನು ಕರ್ನಾಟಕ, ಗೋವಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಿದ್ದೆವು. ಸಿನೆಮಾವನ್ನು ಹೆಚ್ಚಿನ ಚಿತ್ರಮಂದಿರಗಳಿಗೆ ಕೊಂಡೊಯ್ಯುವ ನಿರ್ಧಾರದಲ್ಲಿದ್ದಾಗ ಕೊರೊನಾ ನಿರ್ಬಂಧಗಳು ಆರಂಭವಾದುವು. ನಂತರ ದಿನಗಳಲ್ಲಿ ಮುಚ್ಚಲ್ಪಟ್ಟ ಚಿತ್ರಮಂದಿರಗಳು ಇಂದಿಗೂ ತೆರೆದಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಇನ್ನು ಮುಂದಿನ ಒಂದು ವರ್ಷಕ್ಕೆ ಚಿತ್ರಮಂದಿರಗಳಲ್ಲಿ ಪೂರ್ಣಪ್ರಮಾಣದಲ್ಲಿ ಚಿತ್ರಗಳನ್ನು ಪ್ರದರ್ಶಿಸುವ ಭರವಸೆಯಿಲ್ಲ. ಆದುದರಿಂದ ನಾವು ನಮ್ಮ ಬಹುಬೇಡಿಕೆಯ 'ಬೆಂಡ್ಕಾರ್' ಚಿತ್ರವನ್ನು ಒಟಿಟಿ ವೇದಿಕೆಯಲ್ಲಿ ಪ್ರದರ್ಶಿಸಲು ನಿರ್ಧರಿಸಿದ್ದೇವೆ. ಕರ್ನಾಟಕ ಕರಾವಳಿಯ ಬಹುಭಾಷಿಕರ ನಡುವೆ ಹೆಚ್ಚಿನ ಪ್ರಚಲಿತದಲ್ಲಿರುವ ಲೋಕಲ್ ವುಡ್ಡ್ ಒಟಿಟಿ ವೇದಿಕೆಯಲ್ಲಿ ಜೂನ್ 10 ರಂದು ಸಿನೆಮಾ ವೀಕ್ಷಣೆಗೆ ದೊರೆಯಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
ಖ್ಯಾತ ಕೊಂಕಣಿ ಸಿನೆಮಾ ನಿರ್ದೇಶಕರಾದ ಹ್ಯಾರಿ ಫೆರ್ನಾಂಡಿಸ್ 'ಬೆಂಡ್ಕಾರ್' ಚಿತ್ರವನ್ನು ನಿರ್ದೇಶಿದ್ದು, ಹ್ಯಾರಿ ಫೆರ್ನಾಂಡಿಸ್ ಜೊತೆಗೆ ಪ್ರಿನ್ಸ್ ಜೇಕಬ್, ಡೋಲ್ಫಿ ರೆಬೆಲ್ಲೊ ಹಾಗೂ ಸ್ಟ್ಯಾನಿ ಅಲ್ವಾರಿಸ್ ನಿರ್ಮಾಪಕರಾಗಿದ್ದಾರೆ. ಪ್ರಿನ್ಸ್ ಜೇಕಬ್, ವರ್ಷಾ ಉಸ್ಗಾಂವ್ಕರ್, ಮನೋಗ್ನ, ಜೋನ್ ಡಿ ಸಿಲ್ವಾ, ನೈಸಾ ಲೋಟ್ಲಿಕರ್, ಕೆವಿಲ್ ಡಿ ಮೆಲ್ಲೊ, ದೀಪಕ್ ಪಾಲಡ್ಕ, ಸುನಿತ ಮಿನೇಜಸ್, ಜೋಸೆಫ್ ಮಥಾಯಸ್ ಮುಂತಾದ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.
ಲೋಕಲ್ ವುಡ್ಡ್ ಇದೀಗ ವಿಶ್ವದಾದ್ಯಂತ ನೆಲೆಸಿರುವ ಕರಾವಳಿ ಕನ್ನಡಿಗರ ನೆಚ್ಚಿನ ಒಟಿಟಿ ವೇದಿಕೆಯಾಗಿ ಮಾರ್ಪಟ್ಟಿದೆ. ತುಳು, ಕನ್ನಡ, ಕೊಂಕಣಿ ಭಾಷೆಗಳ ಟಿವಿ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಧಾರವಾಹಿಗಳು, ನಾಟಕ, ಯಕ್ಷಗಾನ ಹೀಗೆ ಹತ್ತು ಹಲವು ಮನೋರಂಜನಾ ಕಾರ್ಯಕ್ರಮಗಳನ್ನು ಇಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ತುಳು, ಕೊಂಕಣಿ ಹಾಗೂ ಕನ್ನಡ ಚಿತ್ರಗಳೂ ಈ ವೇದಿಕೆಯಲ್ಲಿ ಬಿಡುಗಡೆ ತಯಾರಾಗಿವೆ. ಈ ಮೂಲಕ ಹೊಸ ಸಿನೆಮಾಗಳನ್ನು ಮನೆಯಲ್ಲೇ ಕುಳಿತು ಸಂಧರ್ಭಕ್ಕೆ ಅನುಸಾರವಾಗಿ ಅತೀ ಕಡಿಮೆ ದರದಲ್ಲಿ ವೀಕ್ಷಣೆ ಮಾಡುವ ಅವಕಾಶ ವೀಕ್ಷಕರಿಗೆ ದೊರೆಯಲಿದೆ.
ಇನ್ನು ಲೋಕಲ್ ವುಡ್ ಆಪ್ ಇದೀಗಲೇ ಐಒಎಸ್ ಹಾಗೂ ಆಂಡ್ರಾಯ್ಡ್ ತಂತ್ರಜ್ನಾನದಲ್ಲಿ ಲಭ್ಯವಿದೆ. ಅದೇ ರೀತಿ ಕಂಪ್ಯೂಟರ್ ಗಳಲ್ಲಿ (www.localwood.in) ಎಂಬ ವಿಳಾಸದಲ್ಲಿ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಅಮೇಜಾನ್ ಸ್ಟಿಕ್ಕ್ ಹಾಗೂ ಜಿಯೋ ಫೈಬರ್ ನಲ್ಲಿಯೂ ಲೋಕಲ್ ವುಡ್ ಆಪ್ ದೊರೆಯಲಿದೆ.