ಮುಂಬೈ, ಮೇ.30 (DaijiworldNews/HR): ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇರುವ ವಿರಾಟ್ ಕೊಯ್ಲಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದು, 'ನಿಮ್ಮ ಮಗಳ ಹೆಸರಿನ ಅರ್ಥವೇನು? ಆಕೆ ಹೇಗಿದ್ದಾಳೆ?' ಅವಳನ್ನು ನಾವು ಸ್ಪಲ್ಪ ನೋಡಬಹುದಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದು, ಅದಕ್ಕೆ ವಿರಾಟ್ ಕೊಯ್ಲಿ ಉತ್ತರಿಸಿದ್ದಾರೆ.
"ವಮಿಕಾ ಎಂದರೆ ದುರ್ಗಾ ಮಾತೆಯ ಇನ್ನೊಂದು ಹೆಸರು, ನಮ್ಮ ಮಗಳನ್ನು ನಿಮಗೆ ತೋರಿಸಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾ ಎಂದರೆ ಏನು ಅಂತ ಆಕೆಗೆ ಅರ್ಥ ಆಗುವವರೆಗೂ ನಾವು ಅವಳನ್ನು ಅದರಲ್ಲಿ ಪರಿಚಯಿಸದಿರಲು ತೀರ್ಮಾನಿಸಿದ್ದೇನೆ. ಆ ಬಗ್ಗೆ ಅವಳೇ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ಕೊಯ್ಲಿ ಉತ್ತರ ನೀಡಿದ್ದಾರೆ.
ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಸ್ಟಾರ್ ಕಿಡ್ಗಳು ಎಂಬ ಕಾರಣಕ್ಕೆ ಅಂತಹ ಮಕ್ಕಳ ಕಡೆಗೆ ಮಾಧ್ಯಮದ ಕ್ಯಾಮರಾಗಳು ಕೂಡ ಹೆಚ್ಚು ಗಮನಹರಿಸುತ್ತದೆ. ಆದ್ಅರೆ ವಿರುಷ್ಕ ದಂಪತಿಗಳು ಈ ಸಾಲಿಗೆ ಸೇರಲ್ಲ ಎನ್ನಬಹುದು.
ಇನ್ನು ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವಾಗ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಯ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ತಾವು ಎರಡು ಕೋಟಿ ರೂ. ದೇಣಿಗೆ ನೀಡಿರುವುದರೊಂದಿಗೆ ಜನರಿಂದಲೂ ದೇಣಿಗೆ ಸಂಗ್ರಹಿಸಿ ಸಹಾಯ ಮಾಡಿದ್ದಾರೆ.