ಮುಂಬೈ, ಮೇ 29 (DaijiworldNews/MS): ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹಿಂದಿಯ ಕಿರುತೆರೆಯ ಖ್ಯಾತ ನಟಿ ಕಿಶ್ವರ್ ಮರ್ಚೆಂಟ್ , ತಮ್ಮ ವೃತ್ತಿ ಬದುಕಿನ ಕಹಿಘಟನೆಯೊಂದನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.
ಅವಕಾಶ ಬೇಕೆಂದರೆ ನಟ-ನಿರ್ದೇಶಕರ ಜೊತೆ ಹಾಸಿಗೆ ಹಂಚಿಕೊಳ್ಳಬೇಕು ಎನ್ನುವ ಅನಿಷ್ಠ ಪದ್ಧತಿ ಚಿತ್ರರಂಗದಲ್ಲಿ ಇದೆ. ಚಿತ್ರವೊಂದರ ಕುರಿತು ಮಾತುಕತೆಗೆ ತೆರಳಿದ್ದಾಗ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಯ್ತು. ಅವಕಾಶ ಬೇಕು ಅಂದ್ರೆ ಚಿತ್ರದ ನಾಯಕನ ಜೊತೆ ಮಂಚ ಏರಬೇಕು ಅಂತ ನಿರ್ಮಾಪಕರು ನೇರವಾಗಿ ಆಫರ್ ಮಾಡಿದ್ದರು. ಆದರೆ ನಾನು ಅವಕಾಶವೇ ಬೇಡ ಎಂದು ತಿರಸ್ಕರಿಸಿ ಬಂದೆ ಎಂದು ಹೇಳಿಕೊಂಡಿದ್ದಾರೆ.
ಈ ಮೀಟಿಂಗ್ ವೇಳೆ ಈ ನಟಿಯ ತಾಯಿ ಕೂಡ ಜೊತೆಗಿದ್ದರು, ಹಾಸಿಗೆ ಹಂಚಿಕೊಳ್ಳಬೇಕು ನಿರ್ಮಾಪಕ ಸೂಚಿಸಿದ್ದ ನಟ-ನಿರ್ದೇಶಕರಿಗೆ ಬಾಲಿವುಡ್ ನಲ್ಲಿ ದೊಡ್ಡ ಹೆಸರಿದೆ ಎಂದ ಅವರು ನಟ - ನಿರ್ಮಾಪಕ -ನಿರ್ದೇಶಕನ ಹೆಸರು ಬಹಿರಂಗ ಪಡಿಸಲು ಹಿಂದೇಟು ಹಾಕಿದ್ದಾರೆ.
ಅಂದ ಹಾಗೆ ಕಿಶ್ವರ್ ಶಕ್ತಿಮಾನ್ , ಕುಟುಂಬ್, ಕಸೌತಿ ಝಿಂದಗಿ ಕೇ, ಧಡ್ಕನ್, ಪಿಯಾ ಕಾ ಘರ್ ಇತ್ಯಾದಿ ಕಿರುತೆರೆ ದಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.