ಮುಂಬೈ, ಮೇ.22 (DaijiworldNews/HR): ಬಾಲಿವುಡ್ ನಟಿಯರಾದ ಜಾಹ್ನವಿ ಹಾಗೂ ಖುಷಿ ಕಪೂರ್ ಮಾಸ್ಕ್ ಧರಿಸಿ ಮುಂಬೈನಲ್ಲಿ ಸೈಕ್ಲಿಂಗ್ ಮಾಡುವ ವೇಳೆ ಹವ್ಯಾಸಿ ಛಾಯಾಗ್ರಾಹಕರು ಸುತ್ತುವರಿದಿದ್ದು, ಖುಷಿ ಹಾಗೂ ಜಾಹ್ನವಿ ಕಪೂರ್ ಅವರು ಫೋಟೋಗಳಿಗೆ ಪೋಸ್ ನೀಡಲಿಲ್ಲ.
ಕೊರೊನಾ ಲಾಕ್ಡೌನ್ನಿಂದಾಗಿ ಜಿಮ್ಗಳ ಬಾಗಿಲು ಮುಚ್ಚಲಾಗಿದ್ದು, ಈಗ ಸ್ಟಾರ್ಗಳು ಮನೆಗಳ ಬಳಿಯೇ ವ್ಯಾಯಾಮ, ಯೋಗ ಅಂತ ಕಾಲ ಕಳೆಯುತ್ತಿದ್ದಾರೆ. ಈಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮತ್ತು ತಂಗಿ ಖುಷಿ ಕಪೂರ್ ಫಿಟ್ ಆಗಿರಲು ನಗರದಲ್ಲಿ ಸೈಕ್ಲಿಂಗ್ ಮಾಡಿರುವಂತೆ ತೋರುತ್ತದೆ.
ಸಹೋದರಿಯರಿಬ್ಬರು ತನ್ನ ಸ್ನೇಹಿತರೊಬ್ಬರ ಜತೆ ತಮ್ಮ ಸೈಕಲ್ಗಳಲ್ಲಿ ಮಹಾರಾಷ್ಟ್ರದ ಮುಂಬೈನ ಲೋಖಂಡ್ವಾಲಾದಲ್ಲಿ ಕೆಲ ಕಾಲ ಸೈಕಲ್ನಲ್ಲಿ ಸುತ್ತಾಡಿದ್ದು, ಮುಂಬೈನಲ್ಲಿನ ಕೊರೊನಾ ವೈರಸ್ ನಿರ್ಬಂಧದ ನಡುವೆ ಸೈಕ್ಲಿಂಗ್ ಮಾಡಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇನ್ನು ಇನ್ಸ್ಟಾಗ್ರಾಂನಲ್ಲಿ ಹವ್ಯಾಸಿ ಛಾಯಾಗ್ರಾಹಕರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ ಸಹೋದರಿಯರಿಬ್ಬರು ಸೈಕ್ಲಿಂಗ್ ಮಾಡಿಕೊಂಡು ಹೋಗುತ್ತಿರುವುದು ಕಾಣುತ್ತಿದ್ದು, ಇಬ್ಬರು ಕೂಡ ಫೋಟೋಗಳಿಗೆ ಪೋಸ್ ನೀಡಲಿಲ್ಲ.