ಮುಂಬೈ, ಮೇ.21 (DaijiworldNews/PY): "ಮೇ 21, 1994 ರ ಮುಂಜಾನೆ, 18 ವರ್ಷದ ಹರೆಯದ ನನ್ನ ಜೀವನವನ್ನು ಶಾಶ್ವತವಾಗಿ ಬದಲಿಸಿದ್ದು ಮಾತ್ರವಲ್ಲ, ಇದು ಇತಿಹಾಸ ಸೃಷ್ಟಿಸಿದ ದಿನ, ನನ್ನ ಜೀವನವನ್ನು ಅಪ್ಪಿಕೊಂಡ ದಿನ . ಆ ದಿನಕ್ಕಾಗಿ ನಾನು ಎಂದಿಗೂ ಜನರಿಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ" ಎಂದು ಬಾಲಿವುಡ್ನ ಖ್ಯಾತ ನಟಿ ಸುಶ್ಮಿತಾ ಸೇನ್ ಹೇಳಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಮಾಡಿರುವ ಅವರು, "ಮೇ 21,1994 ರ ಮುಂಜಾನೆ, 18 ವರ್ಷದ ಹರೆಯದ ನನ್ನ ಜೀವನವನ್ನು ಶಾಶ್ವತವಾಗಿ ಬದಲಿಸಿದ್ದು ಮಾತ್ರವಲ್ಲ, ಇದು ಇತಿಹಾಸ ಸೃಷ್ಟಿಸಿದ ದಿನ, ನನ್ನ ಜೀವನವನ್ನು ಅಪ್ಪಿಕೊಂಡ ದಿನ. ಆ ದಿನಕ್ಕಾಗಿ ನಾನು ಎಂದಿಗೂ ಜನರಿಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ನ ಖ್ಯಾತ ನಟಿ ಸುಶ್ಮಿತಾ ಸೇನ್ ಅವರು 1994 ರಲ್ಲಿ ಪ್ರತಿಷ್ಟಿತ 'ಮಿಸ್ ಯುನಿವರ್ಸ್' ಕಿರೀಟ ತೊಟ್ಟ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆಗಿನ್ನೂ ಅವರಿಗೆ ಕೇವಲ 18 ವರ್ಷ ವಯಸ್ಸಾಗಿತ್ತು.
ಇದೀಗ ನಟಿ ಸುಶ್ಮಿತಾ ಸೇನ್ ಅವರು 'ಮಿಸ್ ಯುನಿವರ್ಸ್' ಕಿರೀಟ ತೊಟ್ಟು ಇಂದಿಗೆ (ಮೇ 21) ಭರ್ತಿ 27 ವರ್ಷಗಳಾಗಿದ್ದು, ಆ ಕ್ಷಣವನ್ನು ನಟಿ ಸುಶ್ಮಿತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮೇ 21,1994, ಭಾರತ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಗೆದ್ದಿತ್ತು.