ಬೆಂಗಳೂರು, ಮೇ.18 (DaijiworldNews/HR): 2016ರ ಡಿಸೆಂಬರ್ನಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಟನೆಯಲ್ಲಿ ತೆರೆಕಂಡ ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆಯಿದ್ದು, ಕೂಡಲೇ ಅದರ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದ್ದು, ಬಾಲಿವುಡ್ನಲ್ಲಿಯೂ ಚಿತ್ರ ರಿಮೇಕ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದು, ನಟ ಕಾರ್ತಿಕ್ ಆರ್ಯನ್ ಮತ್ತು ಜಾಕ್ವಲಿನ್ ಫರ್ನಾಂಡಿಸ್ ಅವರು ಜೋಡಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ಗೆ ಕಾಲಿಟ್ಟಿದ್ದು, ಒಂದು ವೇಳೆ ಕಿರಿಕ್ ಪಾರ್ಟಿ ರಿಮೇಕ್ ಸೆಟ್ಟೇರಿದರೆ ಅದರಲ್ಲಿ ನೀವು ನಾಯಕಿಯಾಗಿ ನಟಿಸುತ್ತೀರಾ ಎಂಬ ಪ್ರಶ್ನೆ ಸಂದರ್ಶನವೊಂದರಲ್ಲಿ ಉತ್ತರಿಸಿದ ಅವರು, "ಖಂಡಿತವಾಗಿಯೂ ನಟಿಸುವುದಿಲ್ಲ. ಒಮ್ಮೆ ಆ ಪಾತ್ರದಲ್ಲಿ ನಟಿಸಿ ಅದರ ಭಾವನೆಗಳನ್ನು ಫೀಲ್ ಮಾಡಿಕೊಂಡಿದ್ದೇನೆ. ಮತ್ತೆ ಅದನ್ನೇ ಮಾಡಿದರೆ ಹೊಸತನ ನೀಡಲು ನನ್ನಲ್ಲಿ ಏನೂ ಇಲ್ಲ" ಎಂದಿದ್ದಾರೆ.
ಇನ್ನು "ಹೊಸ ಹೊಸ ಕಥೆಗಳ ಮೂಲಕ ಹೊಸ ಅನುಭವವನ್ನು ಪಡೆಯುವ ಅವಕಾಶ ನನಗಿರುವಾಗ ಮತ್ತೆ ನಾನೇಕೆ ಹಳೇ ಅನುಭವಕ್ಕೆ ಗಂಟುಬೀಳಬೇಕು? ಕಿರಿಕ್ ಪಾರ್ಟಿ ಮಾತ್ರವಲ್ಲದೆ, ನನ್ನದೇ ಬೇರೆ ಯಾವ ಸಿನಿಮಾಗಳ ರಿಮೇಕ್ನಲ್ಲಿಯೂ ನಾನು ನಟಿಸುವುದಿಲ್ಲ" ಎಂದು ಹೇಳಿದ್ದಾರೆ.
ಸದ್ಯ ಅಲ್ಲು ಅರ್ಜುನ್ ಜೊತೆ ನಟಿಸಿರುವ ಪುಷ್ಪ ಸಿನಿಮಾ ಎರಡು ಪಾರ್ಟ್ಗಳಲ್ಲಿ ಮೂಡಿಬರಲಿದ್ದು, ಮೊದಲನೇ ಪಾರ್ಟ್ಗೆ ಪುಷ್ಪ ಎಂಬ ಹೆಸರೇ ಇರಲಿದ್ದು, ಎರಡನೇ ಪಾರ್ಟ್ಗೆ ಶೀರ್ಷಿಕೆ ಬದಲಾಯಿಸಲು ನಿರ್ದೇಶಕರು ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ ಎನ್ನಲಾಗಿದೆ.