ಮುಂಬೈ, ಮೇ.16 (DaijiworldNews/HR): ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಹೊಸ ಸಿನಿಮಾ ರಾಧೆ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಇದೀಗ ರಾಧೆಯನ್ನು ಪೈರಸಿ ಮಾಡಿ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಬರೆದುಕೊಂಡಿರುವ ಸಲ್ಮಾನ್ ಖಾನ್ ಅವರು, "ರಾಧೆ ಸಿನಿಮಾವನ್ನು ಪೈರಸಿ ಮಾಡಿ ನೋಡಬೇಡಿ, ಸೈಬರ್ ಸೆಲ್ ನವರು ಪೈರಸಿ ಮಾಡುವ ಸೈಟ್ಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದು, ನೀವು ಅದರಲ್ಲಿ ಸಿಕ್ಕಿಹಾಕಿಕೊಂಡರೆ ತುಂಬಾ ತೊಂದರೆಗೆ ಒಳಾಗಾಗುತ್ತೀರಿ" ಎಂದಿದ್ದಾರೆ.
ಇನ್ನು ಈ ಮೊದಲು ಸಿನಿಮಾ ಬಿಡುಗಡೆಗೂ ಮುನ್ನ ಮಾತನಾಡಿದ ಸಲ್ಲು, "ಎಲ್ಲರೂ ಕೂಡ ರಾಧೆ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ, ಅದನ್ನು ಹೊರತು ಪಡಿಸಿ ಕೆಲವು ಪೈರಸಿ ಸೈಟ್ ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಇದು ಗಂಭೀರ ಅಪರಾಧವಾಗಿದೆ. ಸೈಬರ್ ಸೆಲ್ ಈ ಎಲ್ಲಾ ಅಕ್ರಮ ಸೈಟ್ ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ಯಾರೂ ಕೂಡ ರಾಧೆಯನ್ನು ಪೈರಸಿಯಲ್ಲಿ ನೋಡಲು ಮುಂದಾಗದಿರಿ, ಎಲ್ಲದರೂ ಆ ರೀತಿಯಾಗಿ ಮಾಡಿದರೆ ಸಮಸ್ಯೆಯಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಭುದೇವ ಅವರು ರಾಧೆ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್ ನಾಯಕ ನಟನಾಗಿ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.