ಬೆಂಗಳೂರು, ಮೇ.15 (DaijiworldNews/HR): ಬಹುಭಾಷೆ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮಿಳುನಾಡಿನ ಸೊಸೆಯಾಗುವ ಆಸೆಯನ್ನು ಹೊರ ಹಾಕಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ತಮಿಳುನಾಡಿನ ಸೊಸೆಯಾಗುವ ಆಸೆಯನ್ನು ರಶ್ಮಿಕಾ ಮಂದಣ್ಣ ವ್ಯಕ್ತಪಡಿಸಿದ್ದಾರೆ.
"ನನಗೆ ತಮಿಳು ಸಂಸ್ಕೃತಿ, ಸಂಪ್ರದಾಯ ಅಂದರೆ ತುಂಬಾ ಇಷ್ಟ, ಇನ್ನೂ ವಿಶೇಷವಾಗಿ ತಮಿಳರ ಊಟ, ಆಹಾರ ಪದಾರ್ಥಗಳು ಬಹಳ ಇಷ್ಟವಾಗುತ್ತದೆ. ಹೀಗಾಗಿ ತಮಿಳರ ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ ಎಂದು ಸಂದರ್ಶನವೊಂದರಲ್ಲಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ತಮಿಳು ಸಿನಿಮಾ ಹಿಟ್ ಆಗುತ್ತಿದ್ದಂತೆ ಮದುವೆ ವಿಚಾರ ಮಾತನಾಡಿ, ತಮಿಳರ ಮನೆಯ ಸೊಸೆ ಆಗುತ್ತೇನೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ರಶ್ಮಿಕಾ ಟಾಲಿವುಡ್ ಪ್ರಸ್ತುತ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದು, ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.