ಬೆಂಗಳೂರು, ಮೇ.11 (DaijiworldNews/HR): ಖ್ಯಾತ ನಟ ಕಮಲ್ ಹಾಸನ್ ಮತ್ತು ಸಾರಿಕಾ ಪುತ್ರಿ ಶ್ರುತಿ ಹಾಸನ್ ಅವರು ಶ್ರೀಮಂತಿಕೆಯಲ್ಲೇ ಹುಟ್ಟಿ ಬೆಳೆದಿದ್ದರು ಕೂಡ ಲಾಕ್ಡೌನ್ನಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
''ನನ್ನ ತಂದೆ ಹಾಗೂ ತಾಯಿಯನ್ನು ನಾನು ಅವಲಂಬಿಸಿಲ್ಲ. ಹೀಗಾಗಿ ನಾನು ಕೆಲಸ ಮಾಡಲೇಬೇಕು. ಸೂಟಿಂಗ್ ನಲ್ಲಿ ಮಾಸ್ಕ್ ಇಲ್ಲದೆ ಕೆಲಸ ಮಾಡುವುದರಿಂದ ಆತಂಕ ಉಂಟಾಗುತ್ತದೆ. ಆದರೆ, ನಾನು ಕೆಲಸ ಮಾಡಲೇಬೇಕು. ಯಾಕಂದರೆ ನನಗೂ ಆರ್ಥಿಕ ಸಮಸ್ಯೆಯಿದೆ. ಎಲ್ಲರ ಹಾಗೆ ನನಗೂ ಪರ್ಸನಲ್ ಕಮಿಟ್ಮೆಂಟ್ಗಳಿವೆ" ಎಂದಿದ್ದಾರೆ.
ಇನ್ನು "ನಾನು ಹೆಚ್ಚು ಹಣವನ್ನು ಸಂಪಾದಿಸಬಹುದು, ಆದರೆ ನಾನು ಕೂಡ ಎಲ್ಲರ ಹಾಗೆ ಬಿಲ್ಗಳನ್ನು ಕಟ್ಟಲೇಬೇಕು. ನನ್ನ ಬಿಲ್ಗಳನ್ನು ನಾನೇ ಪಾವತಿಸಬೇಕು. ಕೊರೊನಾಗೂ ಮುನ್ನ ನಾನೊಂದು ಮನೆಯನ್ನು ಖರೀದಿ ಮಾಡಿದ್ದು, ಅದಕ್ಕೆ ನಾನು ಇಎಂಐ ಕಟ್ಟಲೇಬೇಕಿದೆ. ಆರ್ಥಿಕ ನಿರ್ಬಂಧಗಳಿಂದ ನಾನು ಕೆಲಸ ಮಾಡಲೇಬೇಕಿದೆ'' ಎಂದರು.
ಲಾಕ್ಡೌನ್ನಿಂದಾಗಿ ಅನೇಕ ಮಂದಿಗೆ ಊಟ ಮಾಡಲು ಹಾಗೂ ಔಷಧಿ ಖರೀದಿ ಮಾಡಲು ದುಡ್ಡಿಲ್ಲ, ಕೋವಿಡ್ನಿಂದಾಗಿ ನಾವು ಎಷ್ಟೋ ಪಾಠ ಕಲಿಯಬೇಕಿದೆ" ಎಂದು ಸಂದರ್ಶನದಲ್ಲಿ ಶ್ರುತಿ ಹಾಸನ್ ಹೇಳಿದ್ದಾರೆ.