ನವದೆಹಲಿ, ಮೇ. 10 (DaijiworldNews/HR): ಕೊರೊನಾ ಸಂಕಷ್ಟದ ಸಮಯದಲ್ಲಿ ಅನೇಕ ಸಿನಿಮಾ ಸ್ಟಾರ್ಗಳು ಸಹಾಯಸ್ತ ಚಾಚಿದ್ದು, ಇದೀಗ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ದೆಹಲಿಯ ಗುರುದ್ವಾರದ ರಕಬ್ ಗಂಜ್ ಕೊರೊನಾ ಕೇರ್ ಸೆಂಟರ್ಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಈ ಕುರಿತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಜೀಂದರ್ ಸಿಂಗ್ ಸಿರ್ಸಾ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಬಿಗ್ ಬಿ ಅವರು 2 ಕೋಟಿ ದೇಣಿಗೆ ನೀಡಿದ್ದು, ಇಲ್ಲಿನ ಕೂರೊನಾ ಸೆಂಟರ್ ಇಂದು(ಸೋಮವಾರ) ಉದ್ಘಾಟನೆ ಆಗಲಿದ್ದು 400 ಹಾಸಿಗಳ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ 300 ಹಾಸಿಗಳ ವ್ಯವಸ್ಥೆಯನ್ನು ಮಾಡಲಾಗಿದೆ" ಎಂದರು.
"ವಿದೇಶದಿಂದ ಕೊರೊನಾ ಕೇರ್ ಸೆಂಟರ್ಗೆ ಆಕ್ಸಿಜನ್ ಪೂರೈಕೆಯಾಗುವಂತೆ ಕೂಡ ಬಿಬ್ ಬಿ ನೋಡಿಕೊಂಡಿದ್ದಾರೆ" ಎಂದು ಮಜೀಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಇನ್ನು ಅಮಿತಾಬ್ ಬಚ್ಚನ್ ಮಾತ್ರವಲ್ಲದೆ ಜನರ ಜೀವ ಕಾಪಾಡುವಲ್ಲಿ ಬಾಲಿವುಡ್ ನಟ ಸೋನು ಸೂದ್, ನಟಿ ಸಾರಾ ಅಲಿ ಖಾನ್, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ದೇಣಿಗೆ ನೀಡಿದ್ದಾರೆ.