ಮುಂಬೈ, ಮೇ.04 (DaijiworldNews/HR): ಭಾರತೀಯ ಸಿನಿಮಾ ಇದುವರೆಗೆ ಕಂಡ ಅತ್ಯುತ್ತಮ ನಟಿಯರಲ್ಲಿ ನರ್ಗಿಸ್ ಒಬ್ಬರಾಗಿದ್ದು, ಅವರು ಕೊನೆಯುಸಿರೆಳೆದು ನಾಲ್ಕು ದಶಕಗಳಾಗಿದ್ದರೂ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಅದೊಂದು ದೊಡ್ಡ ಆಘಾತವಾಗಿದೆ.
ನರ್ಗಿಸ್ ಅವರ 40 ನೇ ಪುಣ್ಯಸ್ಮರಣೆ ವಾರ್ಷಿಕೋತ್ಸವದ ಅಂಗವಾಗಿ ಅವರ ಮಗ ನಟ ಸಂಜಯ್ ದತ್ ತನ್ನ ತಾಯಿಯನ್ನು ನೆನಪಿಸಿಕೊಂಡು ತಾಯಿಯೊಂದಿಗಿರುವ ಬಾಲ್ಯದ ಪೋಟೊವನ್ನು ಹಂಚಿಕೊಂಡಿದ್ದಾರೆ.
ಸಂಜಯ್ ದತ್ ತಮ್ಮ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ, ನರ್ಗಿಸ್ ತನ್ನ ಮಗನನ್ನು ತಬ್ಬಿಕೊಳ್ಳುವುದು ಕಂಡುಬರುತ್ತಿದ್ದು, ಶೀರ್ಷಿಕೆಯಲ್ಲಿ, "ನಾನು ನಿಮ್ಮನ್ನು ನೆನಪಿಕೊಳ್ಳದ ದಿನವೇ ಇಲ್ಲ ಅಮ್ಮ, ನಿಮ್ಮ ಈ ಪೊಟೋ ನೋಡದೇ ನನ್ನ ಒಂದು ದಿನವೂ ಸಾಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.
ಇನ್ನು ಸಂಜಯ್ ದತ್ ಯಶ್ ಅಭಿನಯದ ಕೆಜಿಎಫ್- 2 ರಲ್ಲಿ ಸೂಪರ್ಸ್ಟಾರ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ರಣಬೀರ್ ಕಪೂರ್ ಅಭಿನಯದ ಶಮ್ಶೇರಾ ಹಾಗೂ ಮತ್ತಿತರ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.