ವಾಷಿಂಗ್ಟನ್, ಏ.26 (DaijiworldNews/HR): 2021ನೇ ಸಾಲಿನ 93ನೇ ಆಸ್ತರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ನೋಮದ್ ಲ್ಯಾಂಡ್ ಸಿನಿಮಾಕ್ಕಾಗಿ ಕ್ಲೋಯ್ ಝಾವೋ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು ಫ್ಲೋರಿಯನ್ ಝೆಲ್ಲರ್ ಪ್ರಶಸ್ತಿ ಪಡೆದುಕೊಂಡರೆ, ಕಾಮಿಡಿ ಥ್ರಿಲ್ಲರ್ 'ಪ್ರಾಮಿಸಿಂಗ್ ಯಂಗ್ ವುಮನ್' ಸಿನಿಮಾಕ್ಕಾಗಿ ಮೂಲ ಚಿತ್ರಕಥೆ ವಿಭಾಗದಲ್ಲಿ ಎಮರಾಲ್ಡ್ ಫಿನ್ನೆಲ್ ಪ್ರಶಸ್ತಿ ಪಡೆದುಕೊಂಡಿದೆ.
ಇನ್ನು 'ದಿ ಫಾದರ್', 'ಜುದಾಸ್ ಮತ್ತು ಬ್ಲ್ಯಾಕ್ ಮೆಸ್ಸಿಹ್', 'ಮಿನಾರಿ', 'ನೋಮಾಡ್ಲ್ಯಾಂಡ್', 'ಸೌಂಡ್ ಆಫ್ ಮೆಟಲ್' ಮತ್ತು 'ದಿ ಟ್ರಯಲ್ ಆಫ್ ಚಿಕಾಗೊ 7' ಚಿತ್ರಗಳು ಆರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ ಎನ್ನಲಾಗಿದೆ.
ಬ್ರಿಟೀಷ್ ನಟ ಡೇನಿಯಲ್ ಕಲುಯುಯಾ 'ಜುದಾಸ್ ಮತ್ತು ಬ್ಲಾಕ್ ಮೆಸ್ಸಿಹ್' ಚಿತ್ರದ ಸಹಾಯಕ ಪಾತ್ರಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದು, ಡೆನ್ಮಾರ್ಕ್ನ 'ಅನದರ್ ರೌಂಡ್' ಸಿನಿಮಾ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಈ ಬಾರಿಯ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಮಾರ್ಚ್ 15 ರಂದು ಘೋಷಿಸಲಾಗಿತ್ತು. ಈ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಡಾಲ್ಬಿ ಥಿಯೇಟರ್ ಮತ್ತು ಯೂನಿಯನ್ ಸ್ಟೇಷನ್ ನಲ್ಲಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.