ಮುಂಬೈ, ಏ. 22(DaijiworldNews/HR): ನಟಿ ಸೋನಾಕ್ಷಿ ಸಿನ್ಹಾ ಬಾಡಿ ಶೇಮಿಂಗ್ ವಿಚಾರವಾಗಿ ಯಾವಾಗಲು ಟ್ರೋಲ್ ಆಗುತ್ತಿದ್ದು, ದಪ್ಪಗೆ ಗುಂಡಗಿದ್ದ ಸೋನಾಕ್ಷಿ ತೂಕದ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಿದ್ದರು.
ಆದರೆ ಇದೀಗ ಅಚ್ಚರಿಯ ರೀತಿಯಲ್ಲಿ ಸೋನಾಕ್ಷಿ ಬದಲಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವರ್ಕೌಟ್ ಮಾಡಿ ಸೋನಾಕ್ಷಿ ಈಗ ಬಳಕುವ ಬಳ್ಳಿಯಂತೆ ಆಗಿದ್ದಾರೆ.
ವರ್ಕೌಟ್ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸೋನಾಕ್ಷಿ ಹಂಚಿಕೊಂಡಿದ್ದು, ಸಣ್ಣ ಆಗಿರುವ ಸೋನಾಕ್ಷಿ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ಭುಜ್ ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ಅವರು, ಬಿಡುಗಡೆಗೆ ಕಾಯುತ್ತಿದ್ದಾರೆ. ಇತ್ತೀಚಿಗೆ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿರುವ ಸೋನಾಕ್ಷಿ ಇನ್ಮುಂದೆಯಾದರೂ ಚಿತ್ರಗಳಲ್ಲಿ ಬ್ಯುಸಿಯಾಗುತ್ತಾರಾ ಎಂದು ಕಾದುನೋಡಬೇಕಿದೆ.