ಮುಂಬೈ,ಏ. 20 (DaijiworldNews/HR): ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ-ನಟಿಯರು ಮುಂಬೈ ತೊರೆದು ವಿದೇಶಗಳತ್ತ ಹಾರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾದ ಎರಡನೇ ಅಲೆ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಬಾಲಿವುಡ್ ನಟ ರಣ್ವೀರ್ ಕಪೂರ್ ಹಾಗೂ ಆಲಿಯಾ ಭಟ್ ಸೋಮವಾರ ಮುಂಬೈನಿಂದ ಮಾಲ್ಡೀವ್ಸ್ಗೆ ಪಯಣ ಬೆಳೆಸಿದ್ದಾರೆ.
ಇನ್ನೊಂದೆಡೆ ಬಾಲಿವುಡ್ನ ಸೂಪರ್ ಪೇರ್ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಮುಂಬೈ ತೊರೆದು ಬೆಂಗಳೂರಿನತ್ತ ಬಂದಿದ್ದಾರೆ.
ಇತ್ತ ಶೂಟಿಂಗ್ಗಾಗಿ ಮುಂಬೈಗೆ ತೆರಳಿದ್ದ ರಶ್ಮಿಕ ಮಂದಣ್ಣ ಮೂಡ ಮುಂಬೈನಲ್ಲಿ ಲಾಕ್ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಹೈದರಾಬಾದ್ಗೆ ವಾಪಸ್ ಆಗಿದ್ದಾರೆ.
ಒಟ್ಟಿನಲ್ಲಿ ಕೊರೊನಾಗೆ ಹೆದರಿ ಸೆಲೆಬ್ರೆಟಿಗಳು ಊರು ಬಿಟ್ಟು ಹೋಗುತ್ತಿರುವುದಂತು ನಿಜ.