ಮುಂಬೈ, ಏ. 18 (DaijiworldNews/HR): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನ ಅನೇಕರ ಮೇಲೆ ಕಂಗನಾ ಆರೋಪ ಮಾಡಿದ್ದರು. ಈಗ ಅವರು ಮತ್ತೆ ಸುಶಾಂತ್ ಸಾವಿನ ವಿಚಾರವನ್ನು ಪ್ರಸ್ತಾಪ ಮಾಡಿ ಈ ಬಾರಿ ಒಂದು ಎಡವಟ್ಟು ಮಾಡಿಕೊಂಡಿದ್ದು ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ.
2020ರಲ್ಲಿ ಕಂಗನಾ ಅವರು ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ. ಅವರನ್ನು ಪ್ಲ್ಯಾನ್ ಮಾಡಿ ಕೊಲೆ ಮಾಡಲಾಯಿತು ಎಂದು ಹಲವು ಬಾರಿ ಹೇಳಿದ್ದು, ಮಾಧ್ಯಮಗಳ ಮುಂದೆಯೂ ಇದೇ ಹೇಳಿಕೆ ನೀಡಿದ್ದರು. ಆದರೆ ಈಗ ಸುಶಾಂತ್ ಅವರದ್ದು ಆತ್ಮಹತ್ಯೆ ಎಂಬ ರೀತಿಯಲ್ಲಿ ಟ್ವೀಟ್ ಮಾಡಿದ್ದು, ಅದು ಅನೇಕರ ಕೋಪಕ್ಕೆ ಕಾರಣ ಆಗಿದೆ.
ಇನ್ನು ಇತ್ತೀಚೆಗೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ನಿಂದ ಹೊರದಬ್ಬಿಸಿಕೊಂಡ ನಟ ಕಾರ್ತಿಕ್ ಆರ್ಯನ್ಗೆ ಸಮಾಧಾನ ಮಾಡುವ ಭರದಲ್ಲಿ ಕಂಗನಾ ಅವರು ಸುಶಾಂತ್ ಸಾವಿನ ವಿಚಾರವನ್ನು ಎಳೆದು ತಂದಿದ್ದರು.
ಕಾರ್ತಿಕ್ ಸ್ವಂತವಾಗಿ ಇಲ್ಲಿಯವರಗೆ ಬೆಳೆದುಬಂದಿದ್ದು, ಅದೇ ರೀತಿ ಅವರು ಮುಂದುವರಿಯಲಿದ್ದಾರೆ. ಕರಣ್ ಜೋಹರ್ ಮತ್ತು ಆತನ ನೆಪೋಟಿಸಂ ಗ್ಯಾಂಗ್ಗೆ ನನ್ನದೊಂದು ಮನವಿ ಏನೆಂದರೆ, ದಯವಿಟ್ಟು ಕಾರ್ತಿಕ್ರನ್ನು ಬಿಟ್ಟುಬಿಡಿ. ಸುಶಾಂತ್ ರೀತಿ ಅವರ ಬೆನ್ನುಹತ್ತಬೇಡಿ. ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ’ ಎಂದು ಕಂಗನಾ ಟ್ವೀಟ್ ಮಾಡಿದ್ದರು. ಅದೇ ಈಗ ಚೆರ್ಚೆಗೆ ಕಾರಣ ಆಗಿದೆ.
ಇನ್ನು ಕಳೆದ ವರ್ಷ ಸುಶಾಂತ್ರದ್ದು ಕೊಲೆ ಎಂದು ಹೇಳಿ, ಈಗ ಆತ್ಮಹತ್ಯೆ ಎಂಬರ್ಥದಲ್ಲಿ ಟ್ವೀಟ್ ಮಾಡಿರುವುದಕ್ಕೆ ಅನೇಕರು ಕಂಗನಾರನ್ನು ತರಾಟೆಗೆ ತೆಗೆದುಕೊಂಡಿದ್ದು, ಕಂಗನಾರ ಹಳೇ ಟ್ವೀಟ್ಗಳ ಸ್ಕ್ರೀನ್ ಶಾಟ್ ತೆಗೆದು ಈಗ ಜನರು ಮತ್ತೆ ನೆನಪಿಸುತ್ತಿದ್ದಾರೆ.