ಬೆಂಗಳೂರು, ಏ.16 (DaijiworldNews/HR): ನಟ ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಈ ವಾರ ನಡೆಯಬೇಕಿದ್ದ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ನಲ್ಲಿ ಭಾಗಿಯಾಗುವುದಿಲ್ಲ ಎಂದು ನಟ ಸುದೀಪ್ ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಿಂದ ಸಾಮಾಜಿಲ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡಿದ್ದು, ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು.
ಇದೀಗ ಈ ವಿಚಾರವಾಗಿ ಟ್ವೀಟ್ ಮೂಲಕ ನಟ ಸುದೀಪ್ ಸ್ವಷ್ಟನೆ ನೀಡಿರುವ ಸುದೀಪ್, "ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ. ವೈದ್ಯರು ಕೆಲವು ದಿನಗಳ ಕಾಲ ರೆಸ್ಟ್ ಮಾಡು ಎಂದಿದ್ದಾರೆ. ಹೀಗಾಗಿ ಬಿಗ್ ಬಾಸ್ ಸೀಸನ್ 8ರ ಈ ವೀಕೆಂಡ್ ಎಪಿಸೋಡ್ ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಬಿಗ್ ಬಾಸ್ ತಂಡ ವಾರದ ಕತೆ ಕಿಚ್ಚನ ಜೊತೆಯ ಬದಲಾಗಿ ಯಾವ ಪ್ಲಾನ್ ಮಾಡುತ್ತದೆ ಎಂಬ ಬಗ್ಗೆ ನನಗೂ ಕುತೂಹಲವಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಹೇಗಾಗಲಿದೆ ಎಂಬುದನ್ನು ಕಾದು ನೋಡಿ" ಎಂದು ಹೇಳಿದ್ದಾರೆ.
ಇನ್ನು ವೀಕೆಂಡ್ನಲ್ಲಿ ಸುದೀಪ್ ಬದಲು ಇನ್ಯಾರು ಬರಬಹುದೆಂಬ ಕಾತುರ ಎಲ್ಲರಲ್ಲಿ ಮೂಡಿದೆ.