ಕನ್ನಡ ಸಿನಿಮಾ 'ಪ್ರೇಮಂ ಪೂಜ್ಯಂ' ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ
Wed, Apr 14 2021 11:37:20 AM
ಮಂಗಳೂರು, ಏ.14 (DaijiworldNews/HR): ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಕನ್ನಡ ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಿತು.
ಈ ಸಿನಿಮಾವನ್ನು ಡಾ.ರಾಘವೇಂದ್ರ ಬಿ.ಎಸ್ ನಿರ್ದೇಶಿಸಿದ್ದು, ಇದು ಪ್ರೇಮ್ ಅವರ 25 ನೇ ಚಿತ್ರವಾಗಿದೆ. ಪ್ರೇಮ್ ಜೊತೆಗೆ ಬೃಂದಾ ಆಚಾರ್ಯ ಮತ್ತು ಐಂದ್ರಿತಾ ರೇ ಮುಖ್ಯ ಪಾತ್ರದಲ್ಲಿದ್ದಾರೆ.
ಚಿತ್ರದ ಟೀಸರ್ ಫೆಬ್ರವರಿ 13 ರಂದು ಬಿಡುಗಡೆಯಾಗಿ ಈಗಾಗಲೇ 2 ಮಿಲಿಯನ್ ವೀಕ್ಷಣೆಗಳನ್ನುಗಳಿಸಿದೆ.
ಈ ಚಿತ್ರವನ್ನು ಡಾ.ರಕ್ಷಿತ್ ಕೆದಂಬಾಡಿ, ಡಾ.ರಾಜ್ಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ನಿರ್ಮಿಸಿದ್ದಾರೆ. ನಿರ್ದೇಶನದ ಹೊರತಾಗಿ ಡಾ.ರಾಘವೇಂದ್ರ ಬಿ.ಎಸ್ ಸಂಗೀತ ಮತ್ತು ಸಾಹಿತ್ಯ, ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರದ ಸಹ- ನಿರ್ಮಾಪಕರಾಗಿ ಡಾ.ದೇವದಾಸ್ ಆಚಾರ್ಯ ಮತ್ತು ಡಾ. ಅರ್ಚಿತ್ ಬೊಲೂರು ಇದ್ದಾರೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ರಿಚರ್ಡ್ ಕೊಯೆಲ್ಹೋ ಮಾತನಾಡಿ, "ವೈದ್ಯರಾಗಿರುವ ಡಾ. ರಾಘವೇಂದ್ರ ಅವರು ಚಲನಚಿತ್ರಗಳಲ್ಲಿ ತೊಡಗಿದ್ದಾರೆ. ಆದರೆ, ಅವರು ವೈದ್ಯರಾಗಿ ತಮ್ಮ ಕರ್ತವ್ಯವನ್ನು ಬದಿಗಿಟ್ಟಿಲ್ಲ. ಈ ಚಲನ ಚಿತ್ರವು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ ಹಾಗಾಗಿ ಹೆಚ್ಚಿನ ಜನರು ಈ ಸಿನಿಮಾವನ್ನು ವೀಕ್ಷಿಸಬೇಕು" ಎಂದರು.
ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿ ಕುಮಾರ್ ಮಾತನಾಡಿ, "ನಾನು 2005 ರಲ್ಲಿ ದೆಹಲಿಯಲ್ಲಿದ್ದಾಗ, ನಾನು ಕನ್ನಡ ಚಲನಚಿತ್ರಗಳನ್ನು ನೋಡುತ್ತಿದ್ದೆ. ನಾನು ಮೈಸೂರಿಗೆ ಬಂದಾಗ, ಪ್ರೇಮ್ ಅವರ ನೆನಪಿರಲಿ ಸಿನಿಮಾದ ಪೋಸ್ಟರ್ ಅನ್ನು ನೋಡಿದೆ. ಚಲನಚಿತ್ರವು ತುಂಬಾ ಚೆನ್ನಾಗಿತ್ತು, ನಾನು ಅದನ್ನು ಮೂರು ಬಾರಿ ನೋಡಿದ್ದೇನೆ. ಕಲಾವಿದರು ಕೇವಲ ಕನ್ನಡ ಚಲನಚಿತ್ರೋದ್ಯಮಕ್ಕೆ ಸೀಮಿತವಾಗಿರಬಾರದು ಇತರ ಕೆಲಸಗಳಲ್ಲಿ ತೊದಗಿಕೊಂಡಿರಬೇಕು ಎಂಬುದನ್ನು ಡಾ.ರಾಘವೇಂದ್ರ ಅವರು ನಿದರ್ಶನ" ಎಂದಿದ್ದಾರೆ
ಕೆಎಂಸಿ ಮಂಗಳೂರು ಇದರ ಡಾ.ಜಿ.ಜಿ ಭಟ್ ಮಾತನಾಡಿ, "ಉತ್ತಮ ಚಲನಚಿತ್ರವನ್ನು ನಿರ್ದೇಶಿಸಿದ ಡಾ.ರಾಘವೇಂದ್ರ ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ಇದು ವರ್ಣರಂಜಿತ ಮತ್ತು ಆಸಕ್ತಿದಾಯಕವಾಗಿ ಕಾಣುತ್ತದೆ ಮತ್ತು ಎರಡು ತಿಂಗಳ ಹಿಂದೆ ಬಿಡುಗಡೆಯಾದ ಟೀಸರ್ ತುಂಬಾ ಸುಂದರವಾಗಿ ಮೂಡಿಬಂದಿದೆ" ಎಂದರು.
"ನಾವು ಕಡಲತೀರಗಳನ್ನು ಹೊಂದಿರುವ ಮಂಗಳೂರಿನಲ್ಲಿರುವುದಕ್ಕೆ ನನಗೆ ಸಂತೋಷವಾಗಿದೆ, ಈ ಸ್ಥಳಗಳು ನನ್ನ ಬೇಸರದ ಸಮಯದಲ್ಲಿ ನೆಮ್ಮದಿ ನೀಡುತ್ತದೆ. ನಿರ್ದೇಶಕ ಡಾ.ರಾಘವೇಂದ್ರ ಅವರು ಸಾಕಷ್ಟು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ, ನಾನು ಅವರ ಪ್ರೀತಿ ಮತ್ತು ಸಿನೆಮಾ ಮೇಲಿನ ಉತ್ಸಾಹವನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ "ಎಂದು ಪ್ರೇಮ್ ಹೇಳಿದರು.
ಇನ್ನು "ನಿರ್ದೇಶಕ ರಾಘವೇಂದ್ರ ಅವರು ನನ್ನನ್ನು ಸಂಪರ್ಕಿಸಿದಾಗ ನನ್ನ 24 ನೇ ಚಿತ್ರದ ನಂತರ ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ನಾನು ಈಗಾಗಲೇ ನಿರ್ಧರಿಸಿದ್ದೆ. ಆದರೆ ಅವರು ಕಥೆಯನ್ನು ತಿಳಿಸಿದಾಗ ಅವರು ಕಥೆ ಮೊದಲಿನಿಂದ ಕೊನೆಯವರೆಗೆ ಸ್ಪಷ್ಟವಾಗಿತ್ತು. ನನ್ನೆಲ್ಲ ಇದುವರೆಗಿನ ಚಲನಚಿತ್ರಗಳು ಸಂಗೀತದ ಹಿಟ್ಗಳಾಗಿವೆ, ಇದು 14 ಹಾಡುಗಳನ್ನು ಒಳಗೊಂಡಿದೆ" ಎಂದರು.
ಶೀರ್ಷಿಕೆ ಗೀತೆ ಸಂಪೂರ್ಣವಾಗಿ ನನ್ನ ರೋಗಿಗಳಿಗೆ ಸಮರ್ಪಿಸಲಾಗಿದೆ ಎಂದು ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್.ಹೇಳಿದ್ದಾರೆ.
ನಟಿ ಬೃಂದಾ ಆಚಾರ್ಯ, ನಟ ವಿಕಾಸ್ ಪುತ್ರನ್, ಮಾಸ್ಟರ್ ಆನಂದ್, ಡಿಒಪಿ ನವೀನ್ ಕುಮಾರ್, ಡಾ.ಮುರಳಿದರ್, ರಾಜೇಶ್ ಭಟ್, ಗಾಯಕ ವಿಹಾನ್, ಗಿಟಾರ್ ವಾದಕ ಚರಣ್, ತ್ಯಾಗರಾಜ ಮತ್ತು ಇತರರು ಉಪಸ್ಥಿತರಿದ್ದರು.
ಸಹ-ನಿರ್ಮಾಪಕರಾದ ಡಾ.ಅರ್ಕಿತ್ ಬೊಲೂರು ಅವರು ಸ್ವಾಗತಿಸಿದರು, ಡಾ.ದೀಪ್ತಿ ಮತ್ತು ಆರ್.ಜೆ.ಅನುರಾಗ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.