ಮುಂಬೈ,ಏ. 06 (DaijiworldNews/HR): ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ದಂಪತಿಗಳು ತಮ್ಮ ಎರಡನೇ ಮಗುವಿನ ಫೋಟೋಗಳನ್ನ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಲ್ಲ. ಆದ್ರೆ ಹೊಸ ಸುದ್ದಿ ಏನಂದ್ರೆ ಅವರ ಮನೆಯ ಸದಸ್ಯರೊಬ್ಬರು ಆಕಸ್ಮಿಕವಾಗಿ ಕರೀನಾರ ಎರಡನೇ ಮಗುವಿನ ಫೋಟೋವನ್ನ ಶೇರ್ ಮಾಡಿದ್ದಾರೆ.
ಕರೀನಾ ತಂದೆ ಮತ್ತು ಹಿರಿಯ ನಟ ರಣಧೀರ್ ಕಪೂರ್ ಅವರು ತಮ್ಮ ಇಬ್ಬರು ಮೊಮ್ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಎರಡನೇ ಮೊಮ್ಮಗನ ಫೋಟೋವನ್ನ ಕೊಲ್ಯಾಜ್ ಮಾಡಿ ಆಕಸ್ಮಿಕವಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಬಳಿಕ ಕೆಲವೇ ಕ್ಷಣಗಳಲ್ಲಿ ಅದನ್ನ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
2021 ಫೆಬ್ರವರಿ 21 ರಂದು ಕರೀನಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು.
ಇನ್ನು ಕರಿನಾರ ಮೊದಲನೇ ಪುತ್ರ ತೈಮೂರ್ ಅಲಿ ಖಾನ್ ಅಕ್ಟೋಬರ್ 16, 2012 ರಂದು ಜನಿಸಿದ್ದಾನೆ.