ಬೆಂಗಳೂರು, ಮಾ.27 (DaijiworldNews/HR): ನಟಿ ಮಿಲನಾ ನಾಗರಾಜ್ ಅಭಿನಯದ ಹಾಗೂ ಅವರ ಪತಿ ನಟ 'ಡಾರ್ಲಿಂಗ್' ಕೃಷ್ಣ ನಿರ್ದೇಶಿಸುತ್ತಿರುವ ಸ್ವಿಮ್ಮಿಂಗ್ಗೆ ಸಂಬಂಧಿಸಿದ 'ಮಿಲಿ' ಸಿನಿಮಾ ತೆರೆ ಮೇಲೆ ಬರಲಿದೆ.
ಈ ಸಿನಿಮಾದ ಕುರಿತು ಮಾಹಿತಿ ನೀಡುವ ಮಿಲನಾ, "ಸದ್ಯಕ್ಕೆ ಚಿತ್ರದ ಹೆಸರು ನೋಂದಣಿ ಮಾಡಿದ್ದು, 'ಲವ್ ಮಾಕ್ಟೇಲ್ 2' ಸಿನಿಮಾ ಮುಗಿದ ಮೇಲೆ ಈ ಚಿತ್ರ ಶುರು ಮಾಡಲು ನಿರ್ಧರಿಸಿದ್ದೇವೆ" ಎಂದರು
ಇನ್ನು ನಾನೇ ಸ್ವಿಮ್ಮರ್ ಆಗಿರುವುದರಿಂದ ತಯಾರಿ ವಿಚಾರದಲ್ಲಿ ಹೆಚ್ಚಿನ ಸಮಯ ಬೇಕಿಲ್ಲ. ಕಥೆ ಡೆವಲಪ್ ಮಾಡಲು ಸಮಯ ತೆಗೆದುಕೊಳ್ಳಲಿದ್ದೇವೆ. ಪೂರಕ ಕಂಟೆಂಟ್ ಸೃಷ್ಟಿಸಲು ಹಲವರನ್ನು ಭೇಟಿ ಮಾಡಲು ಈ ತಾರಾ ಜೋಡಿ ನಿರ್ಧರಿಸಿದೆ ಎನ್ನಲಾಗಿದೆ.