ಮುಂಬೈ, ಮಾ. 24 (DaijiworldNews/HR): ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತೊಮ್ಮೆ ಟ್ರೋಲಿಗನಿಗೆ ಉತ್ತರಿಸಿ ಸುದ್ದಿಯಾಗಿದ್ದಾರೆ.
ನಟ ಅಭಿಷೇಕ್ ಅವರ ಬಿಗ್ ಬುಲ್ ಸಿನಿಮಾ ಟ್ರೈಲರ್ಗೆ ಇತ್ತೀಚೆಗೆ ನೆಟ್ಟಿಗನೊಬ್ಬ, ನೀವೇನಕ್ಕೂ ಪ್ರಯೋಜನವಿಲ್ಲ ನಿಮಗೆ ಚಂದದ ಹೆಂಡ್ತಿ ಇದ್ದಾಳನ್ನೋದೇ ಎಲ್ಲರಿಗೂ ಅಸೂಯೆ ಎಂದಿದ್ದಾನೆ.
ಇನ್ನು ನೀವು ಯಾವುದಕ್ಕೂ ಸಲ್ಲಲ್ಲ, ನಿಮ್ಮ ಬಗ್ಗೆ ಜಲಸ್ ಆಗೋದು ಯಾವುದಕ್ಕೆ ಅಂದರೆ ನಿಮಗೆ ಚಂದದ ಹೆಂಡತಿ ಇದ್ದಾಳೆ. ಅದೂ ನಿಮಗೆ ಅಷ್ಟು ಚಂದದ ಹೆಂಡತಿ ಬೇಡವಾಗಿತ್ತು, ನೀವು ಡಿಸರ್ವ್ ಮಾಡುವುದಿಲ್ಲ ಎಂದು ಕಮೆಂಟ್ ಮಾಡಿದ್ದ ಎಂದು ಟ್ವೀಟ್ ಮಾಡಿದ್ದ.
ಅದಕ್ಕೆ ಉತ್ತರಿಸಿದ ಅಭಿಷೇಕ್, "ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ. ನೀವು ಬಹಳಷ್ಟು ಜನರನ್ನು ಟ್ಯಾಗ್ ಮಾಡಿರುವ ಕಾರಣ ನೀವು ಯಾರನ್ನು ಉಲ್ಲೇಖಿಸುತ್ತಿದ್ದೀರಿ? ನನಗೆ ತಿಳಿದಿದೆ ಇಲಿಯಾನಾ ಮತ್ತು ನಿಕಿ ಮದುವೆಯಾಗಿಲ್ಲ" ಎಂದಿದ್ದಾರೆ.