ಬೆಂಗಳೂರು, ಮಾ.22 (DaijiworldNews/HR): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಿ.ಡಿ. ಲೇಡಿ ಹೆಸರಿನ ಚಿತ್ರದ ಶೀರ್ಷಿಕೆ ಸಂದೇಶ್ ನಾಗರಾಜ್ ಬ್ಯಾನರ್ ಅಡಿ ನೋಂದಣಿಯಾಗಿದೆ.
ಕರ್ನಾಟಕ ರಾಜಕಾರಣದಲ್ಲಿ ಅತಿ ಹೆಚ್ಚು ಸುದ್ದಿಯಾದ ಸಿಡಿ ಪ್ರಕರಣ ಸಂಬಂಧಿಸಿದ ಸುದ್ದಿಗಳು ಟಿವಿ ವಾಹಿನಿಗಳಲ್ಲಿ ಸಿಡಿ ಲೇಡಿ ಶೀರ್ಷಿಕೆಯಲ್ಲೇ ಪ್ರಸಾರವಾಗುತ್ತಿದ್ದು, ಈ ಶಬ್ದಗಳು ಹೆಚ್ಚು ಜನಪ್ರಿಯತೆ ಪಡೆದಿದ್ದವು. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಶೀರ್ಷಿಕೆ ನೋಂದಣಿ ಮಾಡಲಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ನಿರ್ಮಾಪಕ ಸಂದೇಶ್ ನಾಗರಾಜ್, ಸಿಡಿ ಲೇಡಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ. ಕಥೆ ಚಿತ್ರಕಥೆ ಇನ್ನೂ ಸಿದ್ಧವಾಗಿಲ್ಲ. ಯಾವಾಗ ಸೆಟ್ಟೇರುತ್ತದೆ ಅನ್ನೋ ಬಗ್ಗೆಯೂ ನಿರ್ಧರಿಸಿಲ್ಲ. ಮುಂದೆ ಈ ಎಲ್ಲಾ ವಿಚಾರಗಳು ಫೈನಲ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.