ನವದೆಹಲಿ, ಮಾ.21 (DaijiworldNews/HR): ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಚೊಪ್ರಾ ಅವರು ಓಪ್ರಾ ವಿನ್ಫ್ರೆ ಅವರು ನಡೆಸಿಲೊಡುವ ಜಗತ್ತಿನ ಅತ್ಯಂತ ಖ್ಯಾತ ಸಂದರ್ಶನ ಕಾರ್ಯಕ್ರಮ ಸೂಪರ್ ಸೋಲ್ನಲ್ಲಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕ, ತಾನು ನಿಕ್ ಜೊತೆಗೆ ಡೇಟಿಂಗ್ ಮಾಡುವಾಗ ನನಗೆ 35 ವರ್ಷ, ಆತ ಇನ್ನೂ 20 ರ ಹರೆಯದಲ್ಲಿದ್ದ. ಆತ ಹೇಗೆ ನನ್ನೊಂದಿಗೆ ಬೆರೆಯುತ್ತಾನೋ ಎನ್ನುವ ಯೋಚನೆ ನನ್ನ ಮನಸ್ಸಿನಲ್ಲಿದ್ದು, ನನಗೆ 35 ವರ್ಷ, ನಾನು ಮದುವೆಯಾಗಲು ಮತ್ತು ಮಕ್ಕಳನ್ನು ಬಯಸುತ್ತಿದ್ದೆ. ನಿಕ್ ನನ್ನೊಂದಿಗೆ ಹೊಂದಿಕೊಂಡು, ಸಹಕರಿಸುತ್ತಾನೆಯೋ, ಇಲ್ಲವೋ ಎನ್ನುವುದರ ಬಗ್ಗೆ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಗೊಂದಲದ ಭಾವನೆ ಇದ್ದಿತ್ತು ಎಂದು ಹೇಳಿಕೊಂಡಿದ್ದಾರೆ.
ಇನ್ನು, ನಿಕ್ ಜೋನಾಸ್ ಉತ್ತಮ ಆತ್ಮ ವಿಶ್ವಾಸವುಳ್ಳವ, ಸಂವೇದನಾಶೀಲ ವ್ಯಕ್ತಿ, ನನ್ನ ಸಾಧನೆಯ ಬಗ್ಗೆ, ನನ್ನ ಕನಸುಗಳ ಬಗ್ಗೆ ತುಂಬಾ ಉತ್ಸುಕನಾಗಿದ್ದಾನೆ. ನನಗೆ ಎಲ್ಲಾ ರೀತಿಯಲ್ಲೂ ಆತ ಸಹಕರಿಸುತ್ತಿದ್ದು, ನನ್ನೊಂದಿಗೆ ಎಲ್ಲಾ ವಿಚಾರದಲ್ಲೂ ಭಾಗಿಯಾಗಿ, ನಾನು ಮಾಡುವ ಎಲ್ಲಾ ಕೆಲಸಕ್ಕೂ ಪ್ರೋತ್ಸಾಹ ನಿಡುತ್ತಾನೆ ಎಂದು ಪ್ರಿಯಾಂಕ ನಗು ನಗುತ್ತಾ ಹೇಳುತ್ತಾರೆ.
ನಿಕ್ ಜೋನಾಸ್ ಅವರೊಂದಿಗಿನ ಸಂಬಂಧದಲ್ಲಿ ಪ್ರಿಯಾಂಕ ಅವರು ತಮ್ಮ ತಂದೆ ತಾಯಿಯರ ಸಂಬಂಧವನ್ನು ನೆನಪಿಸಿಕೊಂಡಿದ್ದು, ನನ್ನ ಅಮ್ಮನನ್ನು ಆತನಲ್ಲಿ ನಾನು ಕಾಣುತ್ತೇನೆ. ನನ್ನ ತಂದೆ ತಾಯಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದರು, ಒಬ್ಬರಿಗೊಬ್ಬರು ಪ್ರತಿ ಸ್ಪಂದಿಸಿ ತಾವು ಮಾಡುವ ಎಲ್ಲಾ ಕೆಲಸದಲ್ಲಿಯೂ ಹೊಂದಿಕೊಂಡು ಮಾಡುತ್ತಿದ್ದರು, ಅವರಿಬ್ಬರು ಜೊತೆಯಾಗಿ ಖುಷಿ ಖುಷಿಯಿಂದ ಮನೆ ನಿರ್ಮಿಸಿದರು, ನಾನು ಅದರ ಬೆಳವಣಿಗೆಯನ್ನು ನೋಡಿದ್ದೇನೆ, ಹೌದು, ನಾನು ಆಶ್ಚರ್ಯಚಕಿತಳಾಗಿದ್ದೇನೆ. ನಾನು ನಿಕ್ ಜೋತೆ ಅದೇ ರೀತಿಯ ಸಂಬಂಧವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಾರೆ.