ಹೈದರಾಬಾದ್, ಮಾ.17 (DaijiworldNews/PY): ಸದಾ ತಮ್ಮ ಕನ್ನಡಾಭಿಮಾನವನ್ನು ತೋರ್ಪಡಿಸುತ್ತಾ, ಕನ್ನಡಿಗರ ಮನ ಗೆಲ್ಲುತ್ತಿರುವ ನಟಿ ಅನುಷ್ಕಾ ಶೆಟ್ಟಿ ತಮ್ಮ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೂ ಕನ್ನಡದಲ್ಲೇ ಶುಭಾಶಯ ತಿಳಿಸಿದ್ದು, ಮತ್ತೊಮ್ಮೆ ಕನ್ನಡಾಭಿಮಾನ ತೋರ್ಪಡಿಸಿದ್ದಾರೆ.
ಮಂಗಳೂರು ಮೂಲದವರಾದ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಚಿತ್ರದಲ್ಲಿ ಅಭಿನಯಿಸಿದ್ದು, ಹಿಂದಿ, ಕನ್ನಡ ಸೇರಿದಂತೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.
ಮಾ.16ರ ಮಂಗಳವಾರದಂದು ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿರುವ ಅನುಷ್ಕಾ, "ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಪಪ್ಪ ಮತ್ತು ಅಮ್ಮ" ಎಂದು ಬರೆದುಕೊಂಡಿದ್ದಾರೆ.
ಅನುಷ್ಕಾ ಅವರ ಈ ಪೋಸ್ಟ್ ಸಕತ್ ವೈರಲ್ ಆಗಿದ್ದು, ಕನ್ನಡ ನಾಡಿನಲ್ಲಿ ಹುಟ್ಟಿ ಬೇರೆ ರಾಜ್ಯದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರೂ ಕೂಡಾ ಅವರಿಗೆ ಕನ್ನಡದ ಮೇಲಿರುವ ಪ್ರೇಮ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, "ಇದುವೇ ನಿಜವಾದ ಕನ್ನಡ ಪ್ರೇಮ" ಎಂದಿದ್ದಾರೆ.