ಬೆಂಗಳೂರು,ಮಾ.11 (DaijiworldNews/HR): ದಿವಂಗತ ನಟ ಚಿರಂಜೀವಿ ಸರ್ಜಾ ಅವರ ನಟಿಸಿದ್ದ 'ರಣಂ' ಸಿನಿಮಾ ಮಾರ್ಚ್ 26ರಂದು ತೆರೆಯ ಮೇಲೆ ಬರಲಿದೆ ಎಂದು ತಿಳಿದು ಬಂದಿದೆ.
'ರಣಂ' ಸಿನಿಮಾ ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಆರ್ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಶ್ರೀನಿವಾಸ್ ಅವರು ನಿರ್ಮಾಣ ಮಾಡಿರುವ 21ನೇ ಚಿತ್ರ ಇದಾಗಿದೆ.
ಇನ್ನು ಚಿರಂಜೀವಿ ಸರ್ಜಾ ನಟಿಸಿ, ಡಬ್ಬಿಂಗ್ ಸಹ ಪೂರ್ಣಗೊಳಿಸಿರುವ 'ರಣಂ' ಸಿನಿಮಾ ಅವರೆ ಡಬ್ಬಿಂಗ್ ಮಾಡಿರುವ ಕೊನೆಯ ಚಿತ್ರವಾಗಿದೆ.
ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದು, ಎರಡು ತಿಂಗಳ ಹಿಂದೆಯಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು.
ಆ ದಿನಗಳು ಖ್ಯಾತಿಯ ಚೇತನ್, ವರಲಕ್ಷ್ಮೀ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ.