ಮುಂಬೈ, ಮಾ.10 (DaijiworldNews/MB) : ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ತನ್ನ ಬಾಯ್ಫ್ರೆಂಡ್ನ ಹೇರ್ ಕಟ್ ಮಾಡಿ ಆರ್ಟಿಸ್ಟ್ ಅನಿಸಿಕೊಂಡಿದ್ದಾರೆ. ಇರಾ ತನ್ನ ಪ್ರೀತಿಸುವ ಹುಡುಗನಿಗೆ ಪ್ರೀತಿಯ ಹೇರ್ ಕಟ್ ಮಾಡಿರುವ ಫೋಟೋವನ್ನು ಇರಾ ಅವರ ಪ್ರಿಯಕರ ನುಪುರ್ ಶಿಖಾರೆ ಹಂಚಿಕೊಂಡಿದ್ದಾರೆ.
ಈ ವರ್ಷ ಪ್ರೇಮಿಗಳ ದಿನದಂದು ಇರಾ ಖಾನ್ ಹಾಗೂ ನುಪುರ್ ಶಿಖಾರೆ ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಈಗ ತಮ್ಮ ರೊಮ್ಯಾಂಟಿಕ್ ಫೋಟೋಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ.
ಅಮಿರ್ ಖಾನ್ ಪುತ್ರಿ ಇರಾ ತಾನು ಪ್ರೀತಿಸುವ ಹುಡುಗನಿಗೆ ನುಪುರ್ ಶಿಖಾರೆಯ ತಲೆ ಕೂದಲನ್ನು ಕತ್ತರಿಸಿದ್ದಾರೆ. ಇದರ ಫೋಟೋವೊಂದನ್ನು ಮೊದಲು ಪೋಸ್ಟ್ ಮಾಡಿದ ನುಪುರ್ ಗ್ರೂಮಿಂಗ್ ಸೆಶನ್ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.
ಬಳಿಕ ಹೇರ್ ಕಟ್ ಆದ ನಂತರದ ಫೋಟೋವನ್ನು ಹಾಕಿದ್ದು ಆರ್ಟ್ ಹಾಗೂ ಆರ್ಟಿಸ್ಟ್ ಎಂದು ಹೇಳಿದ್ದಾರೆ. ತನ್ನ ಹೊಸ ಹೇರ್ ಸ್ಟೈಲ್ನ್ನು ಆರ್ಟ್ ಎಂದು ಹೇಳಿರುವ ಅವರು, ಹೇರ್ ಕಟ್ ಮಾಡಿದ ತನ್ನ ಪ್ರೇಯಸಿ ಇರಾಳನ್ನು ಆರ್ಟಿಸ್ಟ್ ಎಂದು ಕರೆದಿದ್ದಾರೆ.