ಬೆಂಗಳೂರು, ಮಾ.06 (DaijiworldNews/HR): ಛಾಯಾಗ್ರಾಹಕ ಹಾಗೂ ನಿರ್ಮಾಪಕ ಕೃಷ್ಣ ಅವರ ಮುಂದಿನ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಾ ಏಜೆಂಟ್ ಆಗಿ ನಟಿಸುತ್ತಿದ್ದಾರೆ.
ಪುನೀತ್ ಅವರನ್ನು ಅಭಿಮಾನಿಗಳು ಮೊದಲಿನಿಂದಲೂ ಸೈನಿಕನ ಪಾತ್ರದಲ್ಲಿ ಕಾಣಲು ಹಂಬಲಿಸುತ್ತಿದ್ದು, ಇದೀಗ ಈ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಕೃಷ್ಣ, "ನಾನು ಹಾಗೂ ಪುನೀತ್ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದು, . ನಾನು ಈ ಹಿಂದೆ ಮಾಡಿರುವ ಎಲ್ಲಾ ಸಿನಿಮಾಗಳಿಗಿಂತಲೂ ಈ ಸಿನಿಮಾ ಭಿನ್ನವಾಗಿದೆ. ಇದರಲ್ಲಿ ಪುನೀತ್ ಅವರದ್ದು ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದಾರೆ. ಸಿನಿಮಾದಲ್ಲಿ ನೈಜತೆ ಇರಬೇಕು ಎಂಬ ಕಾರಣಕ್ಕೆ ನಾನು ಭಾರತದ ಹಲವು ರಾ ಏಜೆಂಟ್ಗಳ ಬಗ್ಗೆ ಸಂಶೋಧನೆ ನಡೆಸಿದ್ದೇನೆ. ರಾ ಏಜೆಂಟ್ಗಳೂ ಸೈನಿಕರಂತೆ ದೇಶವನ್ನು ಕಾಯುವ ಕೆಲಸ ಮಾಡುತ್ತಾರೆ. ಅವರು ನಮ್ಮ ದೇಶಕ್ಕೆ ಎಷ್ಟು ಮುಖ್ಯ ಎಂಬುದನ್ನು ಇದರಲ್ಲಿ ತೋರಿಸಲಾಗುತ್ತದೆ" ಎಂದರು.
ಇನ್ನು "ಈ ಸಿನಿಮಾದ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪುನೀತ್ ಹುಟ್ಟುಹಬ್ಬದಂದು ತಿಳಿಸಲಾಗುತ್ತದೆ" ಎಂದು ಕೃಷ್ಣ ತಿಳಿಸಿದ್ದಾರೆ.
ಈ ಸಿನಿಮಾವು ಕೃಷ್ಣ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು, ಈ ಸಿನಿಮಾಕ್ಕೆ ಕರುಣಾಕರ್ ಸಿನಿಮಾಟೊಗ್ರಫಿ ಇದ್ದು, ಸಂಗೀತ ನಿರ್ದೇಶಕರು ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.