ಮಂಗಳೂರು, ಮಾ.04 (DaijiworldNews/HR): ನಿಶಾನ್ ವರುಣ್ ಮೂವೀಸ್ ಬ್ಯಾನರ್ನಡಿಯಲ್ಲಿ ತಯಾರಾಗಿರುವ ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ ಪೆಪ್ಪೆರೆರೆ ಪೆರೆರೆರೆ ತುಳು ಸಿನಿಮಾ ಮಾರ್ಚ್ 7 ರಂದು ಭಾನುವಾರ ನಮ್ಮ ಕುಡ್ಲ ಟಾಕೀಸ್ನಲ್ಲಿ ತೆರೆ ಕಾಣಲಿದೆ.
ಪೆಪ್ಪೆರೆರೆ ಪೆರೆರೆ ಸಿನಿಮಾ ಮಾರ್ಚ್ 7 ರಂದು ಭಾನುವಾರ ಮಧ್ಯಾಹ್ನ 1:30 ಸಂಜೆ 6 ಹಾಗೂ ರಾತ್ರಿ 9 ಗಂಟೆಗೆ ನಮ್ಮ ಕುಡ್ಲ ಟಾಕೀಸ್ನಲ್ಲಿ ಪ್ರದರ್ಶನ ಕಾಣಲಿದೆ.
ಮಾರ್ಚ್ ತಿಂಗಳ ಪ್ರತೀ ಭಾನುವಾರ ಮೂರು ಪ್ರದರ್ಶನಗಳಂತೆ ಒಟ್ಟು 12 ಪ್ರದರ್ಶನಗಳನ್ನು ನಮ್ಮ ಕುಡ್ಲ ಟಾಕೀಸ್ನಲ್ಲಿ ಕಾಣಲಿದ್ದು, ಸಿನಿಮಾ ಮಲ್ಟಿಪ್ಲೆಕ್ಸ್ನಲ್ಲಿ ತೆರೆ ಕಾಣಲಿದ್ದು, ಜತೆಗೆ ಮುಂಬಯಿ ಬೆಂಗಳೂರು ಸಹಿತ ಬೇರೆ ಬೇರೆ ಪ್ರದೇಶಗಳಲ್ಲಿ ಸಿನಿಮಾವನ್ನು ಬಿಡುಗಡೆಯಾಗಲಿದೆ.
ನಿಶಾನ್ ವರುಣ್ ಮೂವೀಸ್ ಬ್ಯಾನರ್ನಡಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವೆಲ್ಲವೂ ವಿಜಯ್ ಶೋಭರಾಜ್ ಪಾವೂರು ಅವರದ್ದಾಗಿದೆ. ರಾಹುಲ್ ಅಮೀನ್ ಅವರ ಸಹ ನಿರ್ದೇಶನವಿರುವ ಈ ಸಿನಿಮಾವನ್ನು ನಿಶಾನ್ ಕೃಷ್ಣ ಭಂಡಾರಿ ಮತ್ತು ವರುಣ್ ಸಾಲ್ಯಾನ್ ಅವರು ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಪಾಟೀಲ್ ಅವರ ಕೆಮರಾದ ಕೈ ಚಳಕವಿರುವ ಸಿನಿಮಾದ ಸಂಕಲನದ ಜವಾಬ್ದಾರಿ ಅಶೋಕ್ ಮತ್ತು ಸುಶಾಂತ್ ಶೆಟ್ಟಿಯವರದ್ದಾಗಿದೆ.
ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಮುಂತಾದ ಘಟಾನುಘಟಿಗಳ ಜತೆಗೆ ದೀಪಕ್ ರೈ ಪಾಣಾಜೆ, ಸತೀಶ್ ಬಂದಲೆ, ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಅರುಣ್ ಬಿ.ಸಿ. ರೋಡ್, ಬಂಟ್ವಾಳ್ ಜಯರಾಮ್ ಆಚಾರ್ಯ , ದಿನೇಶ್ ಕೋಡಪದವು, ಜೆ.ಪಿ. ತುಮಿನಾಡು, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಇಂದುಶೇಖರ ಶೆಟ್ಟಿ, ಅರವಿಂದ ರಾವ್, ಶಶಿರಾಜ್ ಕಾವೂರು, ವಿಜಯ್ ಶೋಭರಾಜ್ ಪಾವೂರು, ಕರುಣಾಕರ ಸರಿಪಲ್ಲ, ಪ್ರಶಾಂತ್ ಸಿ.ಕೆ., ನಟಶೇಖರ ನಾರಾವಿ, ಮೈತ್ರಿ ಕಶ್ಯಪ್, ಚೈತ್ರಾ ಶೆಟ್ಟಿ, ಸುನೀತಾ ಎಕ್ಕೂರು, ಪಿಂಕಿ ರಾಣಿ, ನಮಿತಾ ಕೂಳೂರು, ಮಾ. ಅಶ್ವಿಜ್ ಶೆಟ್ಟಿ, ಬೇಬಿ ಅನ್ವಿಷಾ ವಾಮಂಜೂರು ಮೊದಲಾದವರು ಅಭಿನಯಿಸಿದ್ದಾರೆ.
ನಮ್ಮ ಕುಡ್ಲ ಟಾಕೀಸ್ ಎಂದರೇನು?
ನಮ್ಮ ಕುಡ್ಲ ಟಾಕೀಸ್ ಎಂದರೆ ನಿಮ್ಮ ಮನೆಯೇ ಟಾಕೀಸ್ ಪರಿಕಲ್ಪನೆ. ಕೇಬಲ್ ಟಿವಿ ಸಂಪರ್ಕ ಇರುವ ಮನೆಗಳಲ್ಲಿ ಟಿವಿ ಮೂಲಕ ಹೊಚ್ಚ ಹೊಸ ತುಳು ಸಿನೆಮಾವನ್ನು ನೋಡುವ ಅವಕಾಶ. ಮಲ್ನಾಡ್ ಇನ್ಫೊಟೆಕ್ ಹಾಗೂ ವಿ4 ಇನ್ಫೊಟೆಕ್ ಸಂಪರ್ಕದ ಎಲ್ಲಾ ಕೇಬಲ್ ಆಪರೇಟರ್ಗಳು ಗ್ರಾಹಕರಿಗೆ ನಮ್ಮ ಕುಡ್ಲ ಟಾಕೀಸ್ ಎಂಬ ಪ್ರತ್ಯೇಕ ಚ್ಯಾನೆಲ್ನ ಸಂಪರ್ಕ ಕೊಡಿಸುವರು. ಸಾಮಾನ್ಯ ಟಿವಿಯಲ್ಲಿ ಸಿನೆಮಾ ವೀಕ್ಷಣೆ ಮಾಡಲು ರೂ 120 ಹಾಗೂ ವಿಶೇಷ ಟಿ.ವಿ ಯಲ್ಲಿ ರೂ 160 ಪಾವತಿಸಬೇಕಾಗುತ್ತದೆ. ಚ್ಯಾನೆಲ್ ಸಂಖ್ಯೆ 88 ಅಥವಾ 888 ರಲ್ಲಿ ಪ್ರತೀ ಭಾನುವಾರ 3 ದೇಖಾವೆಗಳನ್ನು ಒಂದು ತಿಂಗಳ ಪರ್ಯಂತ ಒಟ್ಟು 12 ಸಲ ನಮ್ಮ ಕುಡ್ಲ ಟಾಕೀಸ್ನಲ್ಲಿ ವೀಕ್ಷಿಸಬಹುದು. ಸಿನೆಮಾ ವೀಕ್ಷಣೆ ಮಾಡಲು ತಮ್ಮ ಕೇಬಲ್ ಅಪರೇಟರ್ರನ್ನು ಸಂಪರ್ಕಿಸಬಹುದು.
ಈ ಸಿನಿಮಾದ ಒಟಿಟಿ ಟಿಕೇಟ್ ಖರೀದಿಸಿದವರಿಗೆ www.touchwoodmovie.comನ ಮೂಲಕ ಇದೇ 7ರಂದು ಮಧ್ಯಾಹ್ನ 3ರಿಂದ ಮೂರುದಿನಗಳ ಕಾಲ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಇದೇ ಪ್ಲಾಟ್ಫಾರ್ಮ್ನಲ್ಲಿ 199ಕ್ಕೆ ಟಿಕೆಟ್ ಕೂಡ ಲಭ್ಯವಿದೆ. ಥಿಯೇಟರ್ನಲ್ಲಿ ಸಿನಿಮಾ ಬಿಡುಗಡೆಯಾದಾಗ ಇದೇ ಟಿಕೆಟ್ನಲ್ಲಿ ಚಿತ್ರವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಗಿರುವ ಸಿನಿಮಾಪ್ರಿಯರು www.nishavarunmovies.comನಲ್ಲಿ ಟಿಕೆಟ್ ಖರೀದಿಸಿ, ವೀಕ್ಷಿಸಬಹುದು ಎಂದು ಸಿನಿಮಾ ತಂಡ ತಿಳಿಸಿದೆ.