ಬೆಂಗಳೂರು, ಫೆ.22 (DaijiworldNews/HR): ಸ್ಯಾಂಡಲ್ವುಡ್ನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021ರಲ್ಲಿ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾಕ್ಕಾಗಿ ನಟ ಧನಂಜಯ್ ಅತ್ಯುತ್ತಮ ನಟ ಪ್ರಶಸ್ತಿ ಗೆದಿದ್ದು, ದಿಯಾ ಸಿನಿಮಾದ ನಟನೆಗಾಗಿ ಖುಷಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದು, ಆ್ಯಕ್ಟ್ 1978 ಚಿತ್ರಕ್ಕೆ ನಿರ್ದೇಶಕ ಮಾಂಸೋರೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದಿಯಾ ಸಿನಿಮಾವು 2020ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದು, 2020ರಲ್ಲಿ ತೆರೆಕಂಡ ಕನ್ನಡ ಚಿತ್ರಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಸಿನೆಮಾ ಪತ್ರಕರ್ತರು 21 ವಿಭಾಗಗಳಲ್ಲಿ ಆಯ್ಕೆ ಮಾಡಿದ್ದರು. ದಿಯಾ ಚಿತ್ರವು ಒಟ್ಟು ಐದು ಪ್ರಶಸ್ತಿ, ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಲ್ಕು ಹಾಗೂ ಜಂಟಲ್ಮನ್ ಚಿತ್ರಕ್ಕೆ ಮೂರು ಪ್ರಶಸ್ತಿಗಳು ಲಭಿಸಿದೆ ಎನ್ನಲಾಗಿದೆ.
ಇನ್ನು ಮನುಷ್ಯರನ್ನು ಹೊರತು ಪಡಿಸಿದ ವಿಭಾಗದಲ್ಲಿ ಸಿಂಬಾ ಎಂಬ ನಾಯಿಗೆ ಪ್ರಶಸ್ತಿ ಲಭಿಸಿದೆ. ನಾನು ಮತ್ತು ಗುಂಡ ಸಿನಿಮಾದಲ್ಲಿ ಕಾಣಿಸಿಕೊಂಡ ‘ಸಿಂಬಾ’ ಎಂಬ ನಾಯಿ ಮನುಷ್ಯೇತರ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದೆ.
ಪ್ರಶಸ್ತಿ ಪಟ್ಟಿ :
ಅತ್ಯುತ್ತಮ ಚಿತ್ರಕಥೆ - ಅಭಿಜಿತ್ ವೈ.ಆರ್. ಮತ್ತು ಆಕಾಶ್ ಶ್ರೀವತ್ಸ್( ಶಿವಾಜಿ ಸುರತ್ಕಲ್)
ಅತ್ಯುತ್ತಮ ಪೋಷಕ ನಟ - ಅಚ್ಯುತ್ ಕುಮಾರ್(ಮಾಯಾ ಬಜಾರ್)
ಅತ್ಯುತ್ತಮ ಪೋಷಕ ನಟಿ- ತಾರಾ ಅನುರಾಧಾ(ಶಿವಾರ್ಜುನ)
ಅತ್ಯುತ್ತಮ ಸಂಗೀತ ನಿರ್ದೇಶಕ - ರಘು ದೀಕ್ಷಿತ್(ಲವ್ ಮಾಕ್ಟೈಲ್)
ಅತ್ಯುತ್ತಮ ಹಿನ್ನೆಲೆ ಸಂಗೀತ - ಅಜನೀಶ್ ಲೋಕನಾಥ್(ದಿಯಾ)
ಅತ್ಯುತ್ತಮ ಬಾಲನಟ/ನಟಿ - ಆರಾಧ್ಯ ಎನ್. ಚಂದ್ರ(ಜಂಟಲ್ಮನ್)
ಅತ್ಯುತ್ತಮ ಗಾಯಕಿ - ಚಿನ್ಮಯಿ ಶ್ರೀಪಾದ (ದಿಯಾ–ಸೋಲ್ ಆಫ್ ದಿಯಾ)
ಅತ್ಯುತ್ತಮ ಗಾಯಕ - ಸಂಚಿತ್ ಹೆಗ್ಡೆ (ಜಂಟಲ್ಮನ್– ಮರಳಿ ಮನಸಾಗಿದೆ)
ಅತ್ಯುತ್ತಮ ಗೀತ ರಚನೆ - ನಾಗಾರ್ಜುನ ಶರ್ಮ,ಕಿನ್ನಿಲ್ ರಾಜ್(ಜಂಟಲ್ಮನ್-ಮರಳಿ ಮನಸಾಗಿದೆ)
ಅತ್ಯುತ್ತಮ ನೃತ್ಯ ಸಂಯೋಜನೆ - ಎ.ಹರ್ಷ(ಮಾಯಾ ಬಜಾರ್–ಲೋಕ ಮಾಯಾ ಬಜಾರ)
ಅತ್ಯುತ್ತಮ ಛಾಯಾಗ್ರಹಣ - ಶೇಖರ್ ಎಸ್( ಪಾಪ್ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ಸಾಹಸ - ಜಾಲಿ ಬಾಸ್ಟಿನ್(ಪಾಪ್ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ಕಲಾ ನಿರ್ದೇಶನ - ಗುಣ(ಬಿಚ್ಚುಗತ್ತಿ)
ಅತ್ಯುತ್ತಮ ಸಂಭಾಷಣೆ - ಅಶೋಕ್ ಕೆ.ಎಸ್(ದಿಯಾ)
ಅತ್ಯುತ್ತಮ ಸಂಕಲನ - ದೀಪು ಎಸ್ ಕುಮಾರ್(ಪಾಪ್ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ವಿಎಫ್ಎಕ್ಸ್ - ಕಾಣದಂತೆ ಮಾಯವಾದನು