ಮುಂಬೈ , ಫೆ. 21 (DaijiworldNews/HR): ಕರೀನಾ ಕಪೂರ್ ಖಾನ್ ಫೆಬ್ರವರಿ 21ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಕರೀನಾ ಮತ್ತು ಸೈಫ್ ಅಲಿ ಖಾನ್ ಎರಡನೇ ಬಾರಿಗೆ ಗಂಡು ಮಗುವಿಗೆ ತಂದೆ ತಾಯಿಯಾಗಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಂತೋಷ ಹಂಚಿಕೊಂಡಿರುವ ಕರೀನಾ, "ನಾನು ಗಂಡು ಮಗುವಿಗೆ ಜನ್ಮ ನೀಡಿದ್ದು, ತೈಮೂರ್ ಅಲಿ ಖಾನ್ಗೆ ತಮ್ಮ ಬಂದಿದ್ದಾನೆ" ಎಂದು ಬರೆದುಕೊಂಡಿದ್ದಾರೆ.
ಇನ್ನು 2020ರ ಆಗಸ್ಟ್ ನಲ್ಲಿ ದಂಪತಿ ತಮ್ಮ ಎರಡನೇ ಗರ್ಭಧಾರಣೆಯನ್ನು ಘೋಷಿಸಿದ್ದು, "ನಮ್ಮ ಕುಟುಂಬಕ್ಕೆ ನಾವು ಒಂದು ಸೇರ್ಪಡೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ" ಎಂದು ಬರೆದುಕೊಂಡಿದ್ದರು.