ಮಂಗಳೂರು, ಫೆ.19 (DaijiworldNews/HR): ಒಂದು ವರ್ಷದ ಬಳಿಕ ತುಳು ಸಿನಿಮಾ 'ಗಮ್ಜಾಲ್' ಫೆಬ್ರವರಿ 19 ರಂದು ರಾಮಕಾಂತಿ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.
ಫೆಬ್ರವರಿ 19ಕ್ಕೆ ತುಳು ಚಲನಚಿತ್ರೋದ್ಯಮವು 50 ವರ್ಷ ಪೂರೈಸಿದೆ.
ಆರ್ಎಸ್ ಫಿಲ್ಮ್ಸ್, ಶೂಲಿನ್ ಫಿಲ್ಮ್ಸ್ ಮತ್ತು ಮುಗ್ರೊಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗಮ್ಜಾಲ್ ಸಿನಿಮಾ ನಿರ್ಮಾಣವಾಗಿದ್ದು, ಸಂಪೂರ್ಣ ಮನರಂಜನೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶವನ್ನು ಈ ಸಿನಿಮಾ ನೀಡಿದೆ.
ಸುಮನ್ ಸುವರ್ಣ ಮತ್ತು ನವೀನ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಖ್ಯಾತ ನಟ-ನಿರ್ದೇಶಕ ರೂಪೇಶ್ ಶೆಟ್ಟಿ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಜೋಯಲ್ ರೆಬೆಲ್ಲೊ ಮತ್ತು ಡ್ಯಾರೆಲ್ ಮಸ್ಕರೇನ್ಹಾಸ್ ಸಂಗೀತ ಸಂಯೋಜಿಸಿದ್ದಾರೆ. ಜನಪ್ರಿಯ ಕೋಸ್ಟಲ್ ವುಡ್ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಕರಿಷ್ಮಾ ಮತ್ತು ಇತರ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರವು ರಾಮಕಾಂತಿ, ಬಿಗ್ ಸಿನೆಮಾಸ್, ಪಿವಿಆರ್ ಮತ್ತು ನಗರದ ಸಿನೆಪೋಲಿಸ್ ಥಿಯೇಟರ್ನಲ್ಲಿ ಬಿಡುಗಡೆಯಾಗಲಿದೆ. ಕಾಸರಗೋಡು, ಕಾರ್ಕಳ, ಮೂಡುಬಿದ್ರೆ, ಬೆಳ್ತಂಗಡಿ, ಸುಳ್ಯ, ಉಡುಪಿ ಮತ್ತು ಮಣಿಪಾಲದಲ್ಲಿ ಕೂಡ ಬಿಡುಗಡೆಯಾಗಲಿದೆ.
ಬಿಡುಗಡೆ ಸಂಧರ್ಭದಲ್ಲಿ ನಟ ಬೋಜರಾಜ್ ವಾಮಂಜೂರ್, ರೂಪೇಶ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರ್, ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ವಿಜೆ ವಿನೀತ್, ನಟಿ ಕರಿಷ್ಮಾ ಅಮೀನ್ ಮತ್ತು ಇತರರು ಉಪಸ್ಥಿತರಿದ್ದರು.
ನಿತೇಶ್ ಶೆಟ್ಟಿ ಎಕ್ಕಾರ್ ಈ ಕಾರ್ಯಕ್ರಮವನ್ನು ಸಂಯೋಜಿಸಿದರು.