ಬೆಂಗಳೂರು, ಫೆ.07 (DaijiworldNews/PY): ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಂಜು ಸಿನೆಮಾದ ಚಿತ್ರೀಕರಣವು ಫೆ.6ರಂದ ಲಕ್ನೋದಲ್ಲಿ ಆರಂಭವಾಗಿದ್ದು, ಆದರೆ, ಆ ಸಿನಿಮಾದ ಪ್ರಮುಖ ನಾಯಕಿ ರಶ್ಮಿಕಾ ಮಂದಣ್ಣ ಅವರು ಸದ್ಯ ಚಿತ್ರೀಕರಣದಲ್ಲಿ ಪಾಲ್ಗೊಂಡಿಲ್ಲ. ಬದಲಾಗಿ ಅವರಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದು ಹಾರೈಸಿದ್ದಾರೆ.
ಸಿನಿಮಾ ನಿರ್ಮಾಣ ಮಾಡುತ್ತಿರುವ ಆರ್ಎಸ್ವಿಪಿ ಇನ್ಸ್ಟಾಗ್ರಾಂ ಖಾತೆಯ ಮುಖಾಂತರ ಮಿಷನ್ ಮಂಗಲ್ ಕ್ಲಾಪ್ ಬೋರ್ಡ್ ಫೋಟೋವೊಂದನ್ನು ಶೇರ್ ಮಾಡಿದ್ದು, ಭಾರತದ ಮಾರಕ ರಹಸ್ಯ ಕಾರ್ಯಚರಣೆಯ ಪ್ರಥಮ ಅಧ್ಯಾಯ ಇಂದು ಪ್ರಾರಂಭವಾಗಿದೆ ಎಂದು ಬರೆದುಕೊಂಡಿದೆ.
ಲಕ್ನೋದಲ್ಲಿ ಮಿಷನ್ ಮಂಗಲ್ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಲಾಗಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಸಿದ್ದಾರ್ಥ್ ಮಲ್ಹೋತ್ರಾ ಅವರ ದೃಶ್ಯಗಳನ್ನು ಮಾತ್ರವೇ ಚಿತ್ರೀಕರಿಸಲಾಗುತ್ತದೆ. ನಂತರದ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಸಿನಿಮಾ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆ ಸ್ಟೋರಿಯಲ್ಲಿ ಬರೆದುಕೊಂಡ ಅವರು, "ಹಾಹಾಹಾ... ಇಂದು ನಮ್ಮ ಹುಡುಗರು ರೋಲಿಂಗ್ ಪ್ರಾರಂಭಿಸಿದ್ದಾರೆ. ಆಲ್ ದಿ ಬೆಸ್ಟ್. ನಾನು ಇಲ್ಲದೆ ಸಂತೋಷದಿಂದಿರಿ" ಎಂದು ಬೇಸರದ ಸಿಂಬಲ್ ಹಾಕಿ ಹಾರೈಸಿದ್ದಾರೆ. ಈ ಪೋಸ್ಟ್ ಅನ್ನು ಆರ್ಎಸ್ವಿಪಿ ಚಲನಚಿತ್ರ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ಮಿಷನ್ ಮಂಗಲ್ ಸಿನಿಮಾದ ಲೀಡ್ ರೋಲ್ನಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಶೇರ್ ಮಾಡಿದ್ದರು.
ಮಿಷನ್ ಮಂಗಲ್ 1870ರ ನೈಜ ಘಟನೆಗಳಿಂದ ಪ್ರೇರಿತವಾಗಿರುವ ಒಂದು ಪತ್ತೆದಾರಿ ಥ್ರಿಲ್ಲರ್ ಚಿತ್ರವಾಗಿದ್ದು, ಭಾರತ-ಪಾಕಿಸ್ತಾನ ನಡುವಿನ ಸಂಬಂಧವನ್ನು ಶಾಶ್ವತವಾಗಿ ಬದಲಿಸಿದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದು ಸಿನಿಮಾತಂಡ ಹೇಳಿದೆ.