ಬೆಂಗಳೂರು, ಫೆ.04 (DaijiworldNews/HR): ಜನವರಿ 26 ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿ ವಿವಾದವೆಬ್ಬಿಸಿದ್ದ ನಟ ದೀಪ್ ಸಿಧು ನಾಪತ್ತೆಯಾಗಿರುವ ಬೆನ್ನಲ್ಲೇ ಸ್ಯಾಂಡಲ್ವುಡ್ ನಟಿ, ಮಾಜಿ ಸಂಸದೆ ರಮ್ಯಾ ಇದೇ ವಿಚಾರವಾಗಿ ಕೇಂದರ ಸರ್ಕಾರದ ಕಾಲೆಳೆದಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ನಟಿ ರಮ್ಯ, "ದೀಪ್ ಸಿಧು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಛತ್ರಿಯಡಿ ಅವಿತಿರಬಹುದು" ಎಂದು ಹೇಳಿದ್ದಾರೆ.
ಇನ್ನು "ದೀಪ್ ಸಿಧು ಕಾಣೆಯಾಗಿದ್ದಾರಾ?'' ಎಂದು ಪ್ರಶ್ನಿಸಿರುವ ಅವರು, ''ಅವರೆಲ್ಲೋ ಅಮಿತ್ ಶಾ ಅವರ ಛತ್ರಿಯಡಿ ಅಡಗಿಕೊಂಡಿರಬಹುದು ಲಾ... ಲಾ... ಲಾ..." ಎಂದು ಹಾಡಿನ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಗಣರಾಜ್ಯ ದಿನದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಇದಕ್ಕೆ ಪಂಜಾಬಿ ನಟ ದೀಪ್ ಸಿಧು ಕಾರಣವೆಂಬ ಸುದ್ದಿ ಹಬ್ಬುತ್ತಿದ್ದಂತೆ ದೀಪ್ ಸಿಧು ನಾಪತ್ತೆಯಾಗಿದ್ದು, ಅವರ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೋಲೀಸರು ಬುಧವಾರ ಘೋಷಿಸಿದ್ದಾರೆ.