ಬೆಂಗಳೂರು,ಜ.31 (DaijiworldNews/HR): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗುತ್ತಿದ್ದಂತೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಜುಲೈ 16 ರಂದು ಬಹು ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಬಿಡುಗಡೆಯಾಗಲಿದ್ದು, "ಕೆಜಿಎಫ್-2 ಸಿನಿಮಾವನ್ನು ನೋಡುವುದಕ್ಕಾಗಿ ಜುಲೈ 16ನ್ನು ರಾಷ್ಟ್ರೀಯ ರಜೆಯ ದಿನವನ್ನಾಗಿ ಘೋಷಿಸಬೇಕು" ಎಂದು ಯಶ್ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಓನ್ಲಿ ಯಶ್ ಹೆಸರಿನ ಟ್ವೀಟರ್ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಅಭಿಮಾನಿಗಳು ಪ್ರಧಾನಿಯನ್ನು ಟ್ಯಾಗ್ ಮಾಡಿರುವ ಈ ಮನವಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದೆ.