ಬೆಂಗಳೂರು, ಜ.27 (DaijiworldNews/MB) : ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ ಅಭಿನಯದ ಕರ್ನಾಟಕ ಮೂಲದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧಾರಿತ ಚಿತ್ರ ಸೂರರೈ ಪೋಟ್ರು ಆಸ್ಕರ್ ಪ್ರಶಸ್ತಿ ಸ್ಪರ್ಧೆಗಿಳಿದಿದೆ.
ಒಟಿಟಿಯಲ್ಲಿ ಬಿಡುಗಡೆಯಾದ ತಮಿಳು ಭಾಷೆಯ ಮೊದಲ ಚಿತ್ರ ಎಂಬ ಕೀರ್ತಿ ಪಡೆದಿರುವ ಸುಧಾ ಕೊಂಗರ ನಿರ್ದೇಶನದ ಈ ಸಿನಿಮಾ ಈಗ ಆಸ್ತರ್ ಪ್ರಶಸ್ತಿಯ ಸ್ಪರ್ಧೆಗೂ ಇಳಿದಿದೆ. 2021ರ ಮಾರ್ಚ್ 15ರಂದು ನಾಮನಿರ್ದೇಶನ ಪಟ್ಟಿ ಪ್ರಕಟವಾಗಲಿದೆ.
ಕೊರೊನಾ ಕಾರಣದಿಂದಾಗಿ ಅಕಾಡೆಮಿ ಪ್ರಶಸ್ತಿಗಳ (ಆಸ್ಕರ್) ಆಯೋಜಕರು ಈ ವರ್ಷ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳಿಗೂ ಸಹ ಸ್ಪರ್ಧಿಸಲು ಈ ವರ್ಷ ಅವಕಾಶ ನೀಡಲಾಗಿದೆ.
ಆಸ್ಕರ್ನ ಜನರಲ್ ಕ್ಯಾಟಗರಿಯಲ್ಲಿ ಸೂರರೈ ಪೋಟ್ರು ಸಿನಿಮಾವು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಬರಹಗಾರ (ಕಥೆ) ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧಿಸಿದೆ.