ಬೆಂಗಳೂರು, ಜ.24 (DaijiworldNews/HR): ತಮಿಳುನಾಡಿನ ಮುದುಮಲೈ ಅಭಯಾರಣ್ಯ ಪ್ರದೇಶದದಲ್ಲಿ ಆನೆಯೊಂದರ ಮೇಲೆ ಬೆಂಕಿಹಚ್ಚಿ ಹತ್ಯೆ ನಡೆಸಿರುವ ಘಟನೆಗೆ ನಟಿ, ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದು, "ದಯವಿಟ್ಟು ಝೂ, ಸಫಾರಿಗೆ ಹೋಗೋದನ್ನು ನಿಲ್ಲಿಸಿ" ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಧಿರುವ ಅವರು, "ದಯವಿಟ್ಟು ಝೂ, ಸಫಾರಿಗೆ ಹೋಗೋದನ್ನು ನಿಲ್ಲಿಸಿ, ಯಾಕೆಂದರೆ ಪ್ರಾಣಿಗಳಿಗೆ ನಮ್ಮನ್ನು ನೋಡುವ ಆಸೆ ಇರುವುದಿಲ್ಲ. ಅವುಗಳ ಬದುಕನ್ನು ಚಿಂತಾಜನಕ ಸ್ಥಿತಿಗೆ ದೂಡುತ್ತಿದ್ದೇವೆ" ಎಂದರು.
"ಮನುಷ್ಯರು ಯಾಕಿಷ್ಟು ಕ್ರೂರಿಗಳೇಕೆ ಆಗಬೇಕು? ದಯೆ ಮತ್ತು ಕರುಣೆ ಇಂದು ನಾವು ನೋಡುವುದಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಭೂಮಿ ಎಲ್ಲಾ ಜೀವಿಗಳಿಗೆ ಸೇರಿದ್ದು. ಶಾಂತಿ, ಸಹಬಾಳ್ವೆಯ ಜೀವನ ನಡೆಸಲು ನಾವೆಂದು ಕಲಿಯುತ್ತೇವೆ? ಮಾನವರೇ ಈ ಭೂಮಿಯ ಮೇಲಿನ ಅತಿ ಕೆಟ್ಟ ಜೀವಿಗಳು" ಎಂದು ಬರೆದುಕೊಂಡಿದ್ದಾರೆ.