ಬೆಂಗಳೂರು, ಜ.21 (DaijiworldNews/HR): ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಲ್ವುಡ್ ನಟ ದಿವಂಗತ ಚಿರಂಜೀವಿ ಸರ್ಜಾರನ್ನು ನೆನೆದು ಧ್ರುವ ಸರ್ಜಾ ಕಣ್ಣೀರಿಟ್ಟಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧ್ರುವ," ಸಿನಿಮಾದ ಎಡಿಟಿಂಗ್ ವೇಳೆ ಅಣ್ಣ ಸಿನಿಮಾ ನೋಡಿದ್ದು, ಯಾವ ರೀತಿಯಾಗಿ ಮಾಡಬೇಕೆಂದು ಸಲಹೆ ನೀಡಿದ್ದ" ಎಂದು ಹೇಳಿ ಕಳೆದು ಹೋದ ನೆನಪುಗಳನ್ನು ಮೆಲುಕುಹಾಕಿದರು.
ಇನ್ನು "ಫಸ್ಟ್ ಡೇ ಫಸ್ಟ್ ಷೋ ಯಾವಾಗಲೂ ನಾನು ಅಣ್ಣನ ಜೊತೆಗೆ ನೋಡುತ್ತಿದ್ದೆ, ಆದರೆ ಈಗ ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ" ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.
ಪೊಗರು ಸಿನಿಮಾ ಫೆಬ್ರುವರಿ 19ರಂದು ತೆರೆ ಕಾಣಲಿದ್ದು, ಈ ಚಿತ್ರದಲ್ಲಿ ಧ್ರುವಗೆ ಜೋಡಿಯಾಗಿದ್ದಾರೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.
ಇನ್ನು ಈ ಸಿನಿಮಾವನ್ನು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.